

ಕಡಬಿ: ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ. ಯುವ ಜನಾಂಗ ಮಹಾನ್ ಪುರುಷರ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಥಳಿಯ ಸಿದ್ಧಾರೂಢ ಮಠದ ಸದಾನಂದ ಸ್ವಾಮೀಜಿ, ಮಡಿವಾಳಯ್ಯ ಹಿರೇಮಠ, ಹುಂಚಾಳದ ಮಿಜಗುಣ ದೇವರು, ಚಾಯಪ್ಪ ಹುಂಡೇಕಾರ, ಗ್ರಾಪಂ ಅಧ್ಯ ಪ್ರಕಾಶ ಸುಣಧೋಳಿ, ಸದಸ್ಯ ಗಂಗಪ್ಪ ಮೀಸಿ, ಲಕ್ಷ$್ಮಣ ಕುಂಟಿರಪ್ಪಗೋಳ, ಶಂಕರ ಇಟ್ನಾಳ, ಶಿವಬಸಯ್ಯ ಬಸೈನವರ, ಚಿದಾನಂದ ಮಾಳೈನವರ, ನಕುಲ ಮಾಳೈನವರ, ರವೀಂದ್ರ ಮಾಳೈನವರ, ಯಲ್ಲಪ ಹಮ್ಮನವ, ಸಿದ್ಧಪ್ಪ ತುಬಾಕಿ, ಹೊನ್ನಪ್ಪ ಕಂಡ್ರಿ ಇತರರಿದ್ದರು.