

ಹುನಗುಂದ: ತಾಲೂಕಿನ ಸಮೀಪದ ತುರಮರಿ ಗ್ರಾಮದ ಪವಾಡ ಪುರುಷ ಮಳೇಂದ್ರ ಸ್ವಾಮಿಗಳ ಮಹಾರಥೋತ್ಸವ ಶಿವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.
ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ಮಳೇಂದ್ರ ಸ್ವಾಮೀಜಿ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು, ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು.
ಮಳೇಂದ್ರಸ್ವಾಮಿ ರಥೋತ್ಸವಕ್ಕೆ ಘಟ್ಟಿಗನೂರ ಗ್ರಾಮದಿಂದ ಕಲಶ, ಮಲಗಿಹಾಳದಿಂದ ನಿಕಾನೆ, ಬೂದಿಹಾಳ ಎಸ್.ಕೆ. ಗ್ರಾಮದಿಂದ ಬಾಳೆಕಂಬ, ತೆಂಗಿನ ಗರಿ, ಹಾರ, ತಳೀರು ತೋರಣ, ಹೇಮವಾಡಗಿ ಗ್ರಾಮದಿಂದ ರುದಾಕ್ಷಿ ತಂದು ರಥ ಶೃಂಗರಿಸಲಾಗಿತ್ತು.
ಅಜಲಪುರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ರಾಜಗುರು ರಾಜೇಂದ್ರ ಒಡೆಯರ, ಸಜ್ಜಲಗುಡ್ಡದ ಅಡವಿಹಾಳದ ದೊಡ್ಡಬಸವಾರ್ಯ ತಾತನವರು, ಮಳೇಂದ್ರಸ್ವಾಮಿ ಹಿರೇಮಠ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.