ಸಂಭ್ರಮದ ಮೌನೇಶ್ವರ ರಥೋತ್ಸವ

11 SRT
Published on

ಶಿರಹಟ್ಟಿ: ಶ್ರಾವಣದ ಕೊನೆಯ ಸೋಮವಾರ ಪ್ರತಿವರ್ಷ ಜರುಗುವ ವರವಿ ಶ್ರೀ ಮೌನೇಶ್ವರಮಠದ ಮಹಾರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.

ಮಠದ ರಥ ಮಂಟಪದ ಎದುರು ಅಲಂಕೃತಗೊಂಡ ರಥಕ್ಕೆ ಮಠದ ಶ್ರೀಮೌನೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ರಥದಲ್ಲಿ ಮೌನೇಶ್ವರ ಮೂರ್ತಿಯೊಂದಿಗೆ ಆಸೀನರಾಗುತ್ತಿದಂತೆ ಭಕ್ತರು ಹರ..ಹರ..ಮಹಾದೇವ, ಮೌನೇಶ್ವರ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗಿದರು.

ಭಕ್ತರು ತೇರು ಎಳೆಯುತ್ತಿದ್ದಂತೆ ರಥ ಬೀದಿಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಭಕ್ತರು ಉತ್ತತ್ತಿ, ಬಾಳೆ, ಲಿಂಬೆ ಹಣ್ಣು, ಕಲ್ಲುಸಕ್ಕರೆ ಎಸೆದು ಭಕ್ತಿ ಸಮರ್ಪಿಸಿದರು. ಈ ವೇಳೆ ಅಲಂಕೃತ ಆನೆ ಹೆಜ್ಜೆ ಹಾಕುತ್ತ ರಥ ಬೀದಿಯಲ್ಲಿ ಸಾಗುವ ಹಾಗೂ ಡೊಳ್ಳು, ಝಾಂಜ್ ಮೇಳ, ಭಜನೆ ಜಾತ್ರೆಗೆ ಮೆರುಗು ನೀಡಿದವು.

ಮಂಟಪದಿಂದ ಆರಂಭವಾದ ರಥೋತ್ಸವ ಪಾದಗಟ್ಟೆ ವರೆಗೆ ಸಾಗಿ ಮರಳಿ ಮೂಲಸ್ಥಾನಕ್ಕೆ ಆಗಮಿಸಿತು. ರಥೋತ್ಸವದಲ್ಲಿ ವಿಶ್ವಕರ್ಮ ಮಠಾಧಿಪತಿಗಳು, ಹರ, ಗುರು ಚರಮೂರ್ತಿಗಳು ಹಾಗೂ ಶ್ರೀ ಮೌನೇಶ್ವರ ಮಠ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ವಿಶ್ವಕರ್ಮ ಸಮಾಜ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net