9ರಂದು ಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ

ಅಳವಂಡಿಯ ಶ್ರೀ ಸಿದ್ಧೇಶ್ವರ ಮಠದ ಜಾತ್ರೆಯ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು. ಶ್ರೀಮಠದ ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ದೇವಪ್ಪ, ಭೀಮರೆಡ್ಡಿ, ನಜುರುದ್ದಿನ್, ವೀರಭದ್ರಯ್ಯ, ಉಮೇಶಗೌಡ, ಮಂಜುನಾಥ, ಸತೀಶ ಇತರರಿದ್ದರು.
ಅಳವಂಡಿಯ ಶ್ರೀ ಸಿದ್ಧೇಶ್ವರ ಮಠದ ಜಾತ್ರೆಯ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು. ಶ್ರೀಮಠದ ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ದೇವಪ್ಪ, ಭೀಮರೆಡ್ಡಿ, ನಜುರುದ್ದಿನ್, ವೀರಭದ್ರಯ್ಯ, ಉಮೇಶಗೌಡ, ಮಂಜುನಾಥ, ಸತೀಶ ಇತರರಿದ್ದರು.
Published on

ಅಳವಂಡಿ: ಸಿದ್ಧೇಶ್ವರ ಜಾತ್ರೋತ್ಸವ ಜ.30 ರಿಂದ ಆರಂಭವಾಗಿದ್ದು, ಫೆ.10 ವರೆಗೂ ನಡೆಯಲಿದೆ ಎಂದು ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಸಿದ್ಧೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾತ್ರೆಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಸಿದ್ಧೇಶ್ವರ ಮೂರ್ತಿಯನ್ನು ಪಟ್ಟಕ್ಕೆ ಕೂರಿಸಲಾಗಿದೆ. ತೇರಿನ ಗಡ್ಡಿಯನ್ನು ಹೊರಹಾಕಲಾಗಿದೆ. ನಾಲ್ಕು ದಿನಗಳ ಕಾಲ ಲಘು ರಥೋತ್ಸವ ಜರುಗಲಿದ್ದು, ಶಾಂತಮ್ಮ ದೇವಿಗೆ ಮಹಾ ರುದ್ರಾಭಿಷೇಕ ಮತ್ತು ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು. ಫೆ.9 ರಂದು ಸಿದ್ಧೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಾಮೂಹಿಕ ವಿವಾಹ, ಧ್ವಜ ಲೀಲಾವ, ಧ್ವಜಾರೋಹಣ ಹಾಗೂ ಮಹಾರಥೋತ್ಸವ ಜರುಗಲಿದೆ. 10 ರಂದು ಅಯ್ಯಚಾರ ದೀಕ್ಷೆ, ಧರ್ಮಸಭೆ, ಗೋ ಸಾಕಾಣಿಕೆ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಮದ್ದು ಸುಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ದೇವಪ್ಪ ಕಟ್ಟಿಮನಿ, ಭೀಮರೆಡ್ಡಿ ಗದ್ದಿಕೇರಿ, ನಜುರುದ್ದಿನ್ ಬಿಸರಳ್ಳಿ, ವೀರಭದ್ರಯ್ಯ ಶಿರೂರ, ಉಮೇಶಗೌಡ ಪಾಟೀಲ, ಮಂಜುನಾಥ ಹಿರೇಮಠ, ಸತೀಶ್ ಜಾಣಗಾರ, ಭರಮಪ್ಪ ಬಿಸನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net