

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಪಟ್ಟಣದ ಹೊಸೂರ-ಬೈಲಹೊಂಗಲ ಶ್ರೀ ಮೂರುಸಾವಿರ ಮಠದ ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ-2025, ಲಿಂ.ಗಂಗಾಧರ ಮಹಾಸ್ವಾಮೀಜಿ ಅವರ 72ನೇ ಜಯಂತಿ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವವು ೆ.24ರಿಂದ 26ರ ವರೆಗೆ ಶ್ರೀ ಮಠದಲ್ಲಿ ಮೂರು ದಿನಗಳ ಕಾಲ ಪ್ರಭುನೀಲಕಂಠ ಮಹಾಸ್ವಾಮೀಜಿ ಅವರ ನೇತತ್ವದಲ್ಲಿ ಅದ್ದೂರಿಯಾಗಿ ಜರುಗಲಿದೆ.
ೆ.24ರಂದು ಬೆಳಗ್ಗೆ 10ಕ್ಕೆ ಗಂಗಾಧರ ಸ್ವಾಮೀಜಿ ವಿರಕ್ತಮಠ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಈಶಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರ ಸ್ವಾಮೀಜಿ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಪ್ರಭಾ ಅಕ್ಕಾ ಆಗಮಿಸುವರು. ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ ಕಾರ್ಯಕ್ರಮ ಉದ್ಘಾಟಿಸುವರು. ಆಸ್ಪತ್ರೆಯ ಸಿಎಂಒ ಡಾ.ನಾಗೇಂದ್ರ ಪಾಟೀಲ ಸೇರಿ ಅನೇಕ ಗಣ್ಯಮಾನ್ಯರು ಆಗಮಿಸಲಿದ್ದಾರೆ.
ಸಂಜೆ 7ಕ್ಕೆ ನಡೆಯುವ ಧರ್ಮಸಭೆಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಹುಬ್ಬಳ್ಳಿ-ಬೈಲಹೊಂಗಲ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಆಗಮಿಸಲಿದ್ದು, ತಾಳಿಕೋಟಿಯ ಸಿದ್ಧಲಿಂಗ ದೇವರು ಉಪದೇಶಾಮತ ನೀಡುವರು. ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಆಸೀಫ್ ಶೇಠ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ, ಡಿಸಿ ಮೊಹಮ್ಮದ್ ರೋಷನ್ ಹಾಗೂ ಗಣ್ಯಮಾನ್ಯರು ಆಗಮಿಸಲಿದ್ದಾರೆ.
ೆ.25ರಂದು ಬೆಳಗ್ಗೆ 6ಕ್ಕೆ ಅಯ್ಯಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಹಣಬರಟ್ಟಿಯ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿರಕೊಳ್ಳದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಬೀಡಿಯ ಪಡದಯ್ಯ ಶಾಸ್ತ್ರೀ, ಬಸಯ್ಯ ಶಾಸ್ತ್ರೀ, ಬೀಡಿಯ ಚರಂತಯ್ಯ ಶಾಸ್ತ್ರೀ ವೈದಿಕತ್ವ ಮಾಡುವರು.
ಸಂಜೆ 6.30ಕ್ಕೆ ಗಂಗಾಧರ ಸ್ವಾಮೀಜಿ ಅವರ 72ನೇ ಜಯಂತಿ ಮಹೋತ್ಸವ ಹಾಗೂ ಪ್ರವಚನ ಮಂಗಲ ನಡೆಯಲಿದೆ. ಹುಬ್ಬಳ್ಳಿ-ಹಾನಗಲ್ಲದ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಮುರಗೋಡದ ನೀಲಕಂಠ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಆಗಮಿಸಲಿದ್ದು, ಮಣಕವಾಡದ ಅಭಿನವ ಮತ್ಯುಂಜಯ ಸ್ವಾಮೀಜಿ ಉಪದೇಶಾಮತ ನೀಡುವರು. ಜಮಖಂಡಿಯ ಶ್ರೇಷ್ಠ ಸಾಹಿತಿ ನಿರುಪಾಧೀಶ ಸ್ವಾಮೀಜಿ ಅವರಿಗೆ ನೀಲಕಂಠ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಜಗದೀಶ ಶೆಟ್ಟರ್, ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರು, ಮಾಜಿ ಶಾಸಕರು, ಗಣ್ಯ-ಮಾನ್ಯರು ಆಗಮಿಸಲಿದ್ದಾರೆ.
ೆ.26ರಂದು ಬೆಳಗ್ಗೆ 6ಕ್ಕೆ ನೀಲಕಂಠ ಮಹಾಶಿವಯೋಗೀಶ್ವರರ ಹಾಗೂ ಲಿಂ.ಗಂಗಾಧರ ಸ್ವಾಮೀಜಿ ಅವರ ಕರ್ತ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಪಲ್ಕಕ್ಕಿ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 4ಕ್ಕೆ ಮಹಾರಥೋತ್ಸವ ನಡೆಯಲಿದೆ. ನಂತರ 7ಕ್ಕೆ ಸೇವಾರ್ಥಿಗಳಿಗೆ ಸನ್ಮಾನ, ತುಲಾಭಾರ ಸೇವೆ ನಡೆಯಲಿದೆ.
ಸಂಗೀತ ಸಂಭ್ರಮ: ೆ.24ರಂದು ಸಂಜೆ 7ಕ್ಕೆ ಖ್ಯಾತ ಹಿನ್ನೆಲೆ ಗಾಯಕರಿಂದ ಸಂಗೀತ ಸಂಭ್ರಮ, ಮಂಗಳೂರ ಮಿಸ್ ಜ್ಞಾನಾ ಖತಾಳ ಅವರಿಂದ ನತ್ಯ, ಮಂಗಳೂರು ಹೆಜ್ಜೆ ನಾದ ನತ್ಯ ತಂಡದಿಂದ ನತ್ಯೋತ್ಸವ, ರಾಕೇಶ ದಿಲ್ಲೆ, ನಾರ್ದಿ ತಂಡದವರಿಂದ ಸಂಗೀತ ಸಮಾರಂಭ, ಧಾರವಾಡದ ಗೀತಾ ಆಲೂರ ಅವರಿಂದ ಸುಗಮ ಸಂಗೀತ, ನಂದಿನಿ ಅವರಿಂದ ಭರತನಾಟ್ಯ, ಶ್ರೀಮಠದ ಶಾಲಾ, ಕಾಲೇಜು ತಂಡದ ನತ್ಯ, ಏಣಗಿಯ ಶ್ರೀ ಮಾರುತೇಶ್ವರ ಭಜನಾ ತಂಡದಿಂದ ಭಜನಾ ಪದ, ಯಲ್ಲಪ್ಪಾ ಕುಳ್ಳೂರ ಅವರಿಂದ ಗೀಗಿ ಪದ ನಡೆಯಲಿದೆ.
ೆ.25ರಂದು ಸಂಜೆ 7ಕ್ಕೆ ಖ್ಯಾತ ಹಿನ್ನೆಲೆ ಗಾಯಕರಿಂದ ಸಂಗೀತ ಸಂಭ್ರಮ, ಬೆಂಗಳೂರು ಹಾಸ್ಯ ಸಂಜೆ ತಂಡದಿಂದ ಮಿಮಿಕ್ರಿ ಗೋಪಿ, ಸಮದ್ಧಿ ಇವರಿಂದ ಯಕ್ಷಗಾನ ವೈಭವ, ಶ್ರೀಮಠದ ಶಾಲಾ, ಕಾಲೇಜು ತಂಡದ ನತ್ಯ, ಧಾರವಾಡದ ಕಲಾಶಕ್ತಿ ಫೌಂಡೇಷನ್ ಭಜರಂಗಿ ನತ್ಯ, ಸಿದ್ದು ಮೋತೆ ಅವರಾದಿ ಅವರಿಂದ ಡೊಳ್ಳಿನ ಪದ, ಬೆಳವಡಿಯ ಮರೆಮ್ಮಾದೇವಿ ಭಜನಾ ತಂಡದಿಂದ ಭಜನಾ ಪದ, ಬಸವೇಶ್ವರ ಜಾನಪದ ಕಲಾ ತಂಡದವರಿಂದ ಗೀಗಿ ಪದ ನಡೆಯಲಿದೆ.
ೆ.26ರಂದು ಸಂಜೆ 7ಕ್ಕೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ ಹಾಗೂ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕೆಂದು ಅಧ್ಯಕ್ಷರು, ಸದಸ್ಯರು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.