ದುರ್ಗಿಗುಡಿಯಲ್ಲಿ ಮಹಾರಥೋತ್ಸವ

Raghavendra swamy Matha (2)
Published on

ಶಿವಮೊಗ್ಗ: ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಆ.31ರಿಂದ ಸೆ.2ರವರೆಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಆ.31ರಂದು ಗುರುಗಳ ಪೂರ್ವಾರಾಧನೆ, ಸೆ.1ರಂದು ಪುಣ್ಯದಿನ ಮತ್ತು 2ರಂದು ಮಹಾರಥೋತ್ಸವ ನಡೆಯಲಿದೆ. ಆ.30ರಂದು ಶ್ರೀಮಠದಲ್ಲಿ ಸಾಮೂಹಿಕ ಸತ್ಯನಾರಾಯಣಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಬಾರಿ ಭಕ್ತರ ಅಪೇಕ್ಷೆ ಮತ್ತು ಸಹಕಾರದಿಂದ ಗುರುಗಳಿಗೆ ಸ್ವರ್ಣಕವಚ ಮತ್ತು ಸುವರ್ಣ ಪಾದುಕೆಗಳನ್ನು ಸಮರ್ಪಿಸಲಾಗುವುದು. ಆರಾಧನಾ ಕಾಲದ 3 ದಿನಗಳೂ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಇರಲಿದೆ. ಪ್ರತಿದಿನ ಸಂಜೆ ವಿಶೇಷ ಉತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net