ದೋರನಹಳ್ಳಿ ಕ್ವಾರಂಟೈನ್ನಲ್ಲಿ ವಲಸಿಗರು

1105DHL1
Published on

ದೋರನಹಳ್ಳಿ : ಕಿತ್ತೂರುರಾಣಿ ಚನ್ನಮ್ಮ ಶಾಲೆಯಲ್ಲಿ 186 ಹಾಗೂ ಮುರಾಜರ್ಿ ಶಾಲೆಯಲ್ಲಿ 29 ಜನ ಸೇರಿ ಒಟ್ಟು 215 ಜನರು ಮಹಾರಾಷ್ಟ್ರದ ಠಾಣಾದಿಂದ ಬಂದ ಕೂಲಿ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು 8 ಜನರು ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲೂಕಿನವರಾಗಿದ್ದರಿಂದ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ್ ಜಗನ್ನಾಥ ರಡ್ಡಿ ಮಾಹಿತಿ ನೀಡಿದರು.

ಸೋಮವಾರ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕ್ವಾರಂಟೈನ್ನಲ್ಲಿರುವವರಿಗೆ ನಿತ್ಯ ಬಳಸುವ ಪೇಸ್ಟ್, ಬ್ರಶ್, ಸಾಬೂನು, ಎಣ್ಣೆ ಸೇರಿ ಇತರೆ ಅಗತ್ಯ ವಸ್ತುಗಳ ಕಿಟ್ ನೀಡಬೇಕು ಎಂದು ಸೂಚಿಸಿದ ಅವರು, ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ ಯಾರು ಆತಂಕ ಪಡಬೇಕಿಲ್ಲ ಎಂದು ಹೇಳಿದರು.

ಸಿಪಿಐ ಹಣುಮರೆಡ್ಡೆಪ್ಪ ಭೇಟಿ ನೀಡಿದರು. ಕ್ವಾರಂಟೈನ್ ಕೇಂದ್ರದಲ್ಲಿ ವೈದ್ಯರಾದ ಡಾ.ವಿನಾಯಕ್ ಗೋಲಗೇರಿ, ಡಾ.ಹರೀಶ್ ಕುಮಾರ ಬಗಲಿ, ತಾಲೂಕು ಹಿರಿಯ ಆರೋಗ್ಯ ಸಹಾಯಕ ಸಂಗಣ್ಣ ನುಚ್ಚಿನ್, ಶರಣಬಸವ, ಶಿವಯೋಗಪ್ಪ ಎಸ್ ಅಂಗಡಿ, ಚಂದ್ರಾಮಪ್ಪ ಯಕ್ಷಿಂತಿ, ದೋರನಹಳ್ಳಿ ಡಿಟಿ ಸಂಗಮೇಶ, ಕಂದಾಯ ಅಧಿಕಾರಿ ದೇವರಾಜ ಪಾಟೀಲ್, ಪಿಡಿಒ ಗೋವಿಂದ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net