ಮಹಾರಾಣಿ ಕ್ಲಸ್ಟರ್ ವಿವಿ: ಹಂಗಾಮಿ ಕುಲಪತಿಯಾಗಿ ಡಾ. ಮಂಜುನಾಥ್ ನೇಮಕ

TM Manjunath
Published on

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ ಡಾ. ಟಿ.ಎಂ. ಮಂಜುನಾಥ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಮಂಜುನಾಥ್ ಅವರು ಪ್ರಸ್ತುತ ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಮಾನವಿಕ ಮತ್ತು ಉದಾರ ಕಲೆಗಳ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಧಿಯು ಕಾಯಂ ಕುಲಪತಿ ನೇಮಕ ಮಾಡುವವರೆಗೆ ಅಥವಾ ನಿರ್ದೇಶಕರ ಅವಧಿ ಮುಗಿಯುವ ಇದೇ ವರ್ಷದ ಅ.16ರವರೆಗೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net