ಮಹಾರಾಣಾ ಪ್ರತಾಪ ಆದರ್ಶಪ್ರಾಯ

web2
ಬೈಲಹೊಂಗಲದಲ್ಲಿ ಮಹಾರಾಣಾ ಪ್ರತಾಪ ಸಿಂಗ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಹಾದೇವಸಿಂಗ್ ರಜಪೂತ, ಅನ್ನಪೂರ್ಣಾ ರಜಪೂತ, ಶೋಭಾ ಕಿಲ್ಲೇದಾರ, ಧರ್ಮಸಿಂಗ್ ಕೊತವಾಲ ಇತರರು ಇದ್ದರು.
Published on

ಬೈಲಹೊಂಗಲ: ಮಹಾರಾಣಾ ಪ್ರತಾಪ ಸಿಂಗ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ರಜಪೂತ ಸಮುದಾಯದ ತಾಲೂಕು ಅಧ್ಯಕ್ಷ ಮಹಾದೇವಸಿಂಗ್ ರಜಪೂತ ಹೇಳಿದರು.

ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪ ಸಿಂಗ್‌ರ 484ನೇ ಜಯಂತಿ ಹಾಗೂ ಉಚಿತ ವಧು-ವರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾರಾಣಾ ಪ್ರತಾಪ ಸಿಂಗ್ ಆದರ್ಶ ಮೌಲ್ಯ, ದೇಶದ ಬಗ್ಗೆ ಇದ್ದ ಕಾಳಜಿ, ಶೌರ್ಯ, ಧೈರ್ಯವನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದರು.

ಅನ್ನಪೂರ್ಣಾ ರಜಪೂತ, ಶೋಭಾ ಕಿಲ್ಲೇದಾರ, ಧರ್ಮಸಿಂಗ್ ಕೊತವಾಲ, ಪ್ರತಾಪಸಿಂಗ್ ರಜಪೂತ, ಮಾನಸಿಂಗ್ ರಜಪೂತ, ಹನುಮಂತಸಿಂಗ್ ಹಜೇರಿ, ಬಾಲಾಜಿಸಿಂಗ್ ಆರ್., ಪ್ರಸನ್ನಸಿಂಗ್ ಹಜೇರಿ, ವಿಶಾಲ ಸಿಂಗ್ ರಜಪೂತ, ರಾಮಸಿಂಗ್ ರಜಪೂತ, ರಾಜಶೇಖರಸಿಂಗ್ ರಜಪೂತ, ಬಸವರಾಜ ಬಡಿಗೇರ, ಆರತಿ ರಜಪೂತ, ಮಹೇಂದ್ರಸಿಂಗ್ ಹಜೇರಿ, ಗೋಪಾಲಸಿಂಗ್ ರಜಪೂತ, ಮಾರುತಿಸಿಂಗ್ ರಜಪೂತ, ಮಾರುತಿ ಕರದಿನ, ಲಕ್ಷ್ಮಣ ಚೌಗಲೆ, ಅನೂಪಮಸಿಂಗ್ ರಜಪೂತ, ಅಮರಜಿತಸಿಂಗ್ ರಜಪೂತ, ಪ್ರತಿಭಾ ಚೌಗಲೆ, ದಿವ್ಯಾ ರಜಪೂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net