

ಕಂಪ್ಲಿ: ಇಲ್ಲಿನ ವಿಜಯನಗರ ಜೋಗಿ ಕಾಲುವೆ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಂಪ್ಲಿ ರಜಪೂತ್ ಸಮಾಜದಿಂದ ರಾಷ್ಟ್ರವೀರ ಮಹಾರಾಣಾ ಪ್ರತಾಪ್‌ಸಿಂಗ್ ಜಯಂತ್ಯುತ್ಸವ ಭಾನುವಾರ ಆಚರಿಸಲಾಯಿತು.
ರಜಪೂತ್ ಸಮಾಜದ ತಾಲೂಕು ಅಧ್ಯಕ್ಷ ಇಂದ್ರಜಿತ್‌ಸಿಂಗ್ ಮಾತನಾಡಿ, ಮಹಾರಾಣಾ ಪ್ರತಾಪ್‌ಸಿಂಗ್ ಅವರ ಧೈರ್ಯ, ಶೌರ್ಯ, ದೇಶಪ್ರೇಮ, ಹೋರಾಟ ಮನೋಭಾವನೆ, ಹಿಂದು ಧರ್ಮದ ಮೇಲಿನ ಅಪಾರ ಶ್ರದ್ಧೆ ಇಂದಿನ ಯುವಜನತೆಗೆ ಆದರ್ಶವಾಗಿವೆ. ಪಟ್ಟಣದ ವೃತ್ತ, ರಸ್ತೆ, ಬಡಾವಣೆಗಳಿಗೆ ಮಹಾರಾಣ ಪ್ರತಾಪ್‌ಸಿಂಗ್ ಅವರ ಹೆಸರಿಡುವ ಮೂಲಕ ಜನತೆಯಲ್ಲಿ ಉದಾತ್ತ ಮನೋಭಾವನೆಗಳನ್ನು ಪ್ರೇರೇಪಿಸುವಲ್ಲಿ ಪುರಸಭೆ ಮುಂದಾಗಬೇಕು. ರಜಪೂತ್ ಸಮುದಾಯ ಭವನಕ್ಕೆ ನಿವೇಶನ ನೀಡುವಲ್ಲಿ ಜನಪ್ರತಿನಿಧಿಗಳು ಕಾಳಜಿವಹಿಸಬೇಕು ಎಂದರು.
ರಜಪೂತ್ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಮಾರುತಿಸಿಂಗ್, ಪದಾಧಿಕಾರಿಗಳಾದ ಉದಯ್ ಸಿಂಗ್, ಕಿಶನ್‌ಸಿಂಗ್, ಭವಾನಿಸಿಂಗ್, ಹರಿಸಿಂಗ್, ಲಕ್ಷ್ಮಣಸಿಂಗ್, ರತನ್‌ಸಿಂಗ್, ಉಮೇಶ್‌ಸಿಂಗ್ ಇತರರಿದ್ದರು.