

ನಂದೇಶ್ವರ: ಸತ್ತಿ ಗ್ರಾಮಸ್ಥರಿಗೆ ಲಿಂ.ಶ್ರೀ ಬಾಳಕೃಷ್ಣ ಮಹಾರಾಜರು ಸಂಸ್ಕಾರ, ಸಂಸ್ಕೃತಿ ಉಡುಗೊರೆಯಾಗಿ ನೀಡಿದ್ದಾರೆ. ಅವರ ಬದುಕು ಎಲ್ಲರಿಗೂ ಆದರ್ಶ ಎಂದು ಶೇಗುಣಿಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಮಂಗಳವಾರ ಜರುಗಿದ ಲಿಂ.ಶ್ರೀಬಾಳಕೃಷ್ಣ ಮಹಾರಾಜರ 27ನೇ ಪುಣ್ಯರಾಧನೆಯ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿ, 27 ವರ್ಷಗಳಿಂದ ಮಹಾರಾಜರ ಪುಣ್ಯರಾಧನೆ ನಿರಂತರವಾಗಿ ಜರುಗುತ್ತಿರುವುದು ಎಲ್ಲರೂ ಹೆಮ್ಮೆಯ ಸಂಗತಿ. ಮಹಾರಾಜರು ತೋರಿದ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ಹೇಳಿದರು. ಸಂಖ ವಿರಕ್ತಮಠದ ಡಾ. ಮಹೇಶ ದೇವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂದರು.
ಜಮಖಂಡಿ ಕಲ್ಯಾಣ ಮಠದ ಶ್ರೀಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಂಕಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಸತ್ತಿ ಗ್ರಾಮದ ಶ್ರೀ ಕಾಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಪ್ರಸಾದ ಸೇವೆ ಜರುಗಿತು. ಸೂರ್ಯಕಾಂತ ನೀಲೂರ ಹಾಗೂ ಶ್ರೀಶೈಲ ಜಕ್ಕಪ್ಪನವರ ಸಂಗೀತ ಸೇವೆ ಸಲ್ಲಿಸಿದರು. ಆನಂದಕುಮಾರ ಪಾಟೀಲ ಸ್ವಾಗತಿಸಿದರು. ಬಸವರಾಜ ಮಡಿವಾಳ ನಿರೂಪಿಸಿದರು. ವಕೀಲ ಶಂಕರ ಮಟ್ಟೆಪ್ಪನವರ ವಂದಿಸಿದರು.