ಮೈಸೂರಿನ ಮಹಾರಾಜ ಕಾಲೇಜು ಕಟ್ಟಡದ ಸೀಲಿಂಗ್ ಕುಸಿತ: ಪರೀಕ್ಷೆಗೆ ಕುಳಿತ್ತಿದ್ದ ವಿದ್ಯಾರ್ಥಿಗಳು ಗಾಯ

ceiling collapse
Published on

ಮೈಸೂರು: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತಿದ್ದ ವಿದ್ಯಾರ್ಥಿಗಳ ಮೇಲೆ ಸೀಲಿಂಗ್ ಕುಸಿದಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಬುಧವಾರ ಬೆಳಗ್ಗೆ 11.30ರಲ್ಲಿ ಈ ಅವಘಡ ಸಂಭವಿಸಿದೆ. ಕಾಲೇಜಿನಲ್ಲಿ ಇಂದು ಆಂತರಿಕ ನಿಬಂಧನೆಯ ಎಕ್ಸಾಂ ಇತ್ತು. ಪರೀಕ್ಷೆ ನಡೆಯುತ್ತಿದ್ದ ವೇಳೆ ಕಟ್ಟಡದ ಸೀಲಿಂಗ್ ಕಳಚಿ ಬಿದ್ದಿದೆ.

ಘಟ‌ನೆಯಲ್ಲಿ ವಿದ್ಯಾರ್ಥಿಗಳಾದ ವಿಶಾಲ್, ಯಶವಂತ್ ಮತ್ತು ಸಲೀಂಗೆ ಗಾಯಗೊಂಡಿದ್ದು, ಕೂಡಲೇ ಮೈಸೂರಿನ ಶಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ ಓರ್ವ ವಿದ್ಯಾರ್ಥಿಯ ತಲೆಗೆ ಪೆಟ್ಟಾಗಿದೆ. ಸ್ಥಳಕ್ಕೆ ಪ್ರಾಂಶುಪಾಲರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net