

ಶಿಕಾರಿಪುರ: ಕನಕದಾಸರು ವ್ಯಾಸಕೂಟದ ದಾಸ ಶ್ರೇಷ್ಠರಲ್ಲಿ ವಿಶಿಷ್ಟ ದಾಸರಾಗಿದ್ದರು. ಅವರ ಸಾಮಾಜಿಕ ಕಳಕಳಿ ಅದ್ಭುತವಾಗಿತ್ತು ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.
ಪಟ್ಟಣದ ಕನಕ ಪಾರ್ಕ್ನಲ್ಲಿ ಗುರá-ವಾರ ಸರಳವಾಗಿ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಮಾತನಾಡಿ, ಕನಕದಾಸರ ವ್ಯಕ್ತಿತ್ವ ಮಾದರಿ. ಅವರು ಇಡೀ ಸಮಾಜಕ್ಕೇ ದಾರಿದೀಪ. ಅವರ ದಾಸಪದಗಳು ಸಾಮರಸ್ಯ, ಸಹಬಾಳ್ವೆ, ಸದ್ವಿಚಾರಗಳ ಸಂಗಮ. ಜಗದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಯುಗಪುರುಷ ಎಂದು ಬಣ್ಣಿಸಿದರು.
ಕುರುಬ ಸಮಾಜದ ಕೊಡುಗೆ ಅಪಾರ. ಕವಿರತ್ನ ಕಾಳಿದಾಸನಿಂದ ಹಿಡಿದು ರಾಯಣ್ಣನವರೆಗೆ ಎಲ್ಲ ಕ್ಷೇತ್ರದಲ್ಲಿ ಕುರುಬ ಸಮುದಾಯವನ್ನು ಪ್ರತಿನಿಧಿಸಿದ್ದಾರೆ. ಈ ಸಮಾಜ ಅತ್ಯಂತ ಸ್ವಾಭಿಮಾನಿ ಮತ್ತು ಸಹೃದಯಿ ಸಮಾಜ. ಶಿಕಾರಿಪುರದಲ್ಲಿ ಕನಕ ಭವನ ನಿರ್ವಣಕ್ಕೆ ಕುರುಬ ಸಮಾಜದಿಂದ ಸಂಸದರಿಗೆ, ಸಿಎಂಗೆ ಮನವಿ ಮಾಡಿದ್ದು ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಕುರುಬ ಸಮಾಜದ ಅದ್ಯಕ್ಷ ಕಬಾಡಿ ರಾಜಣ್ಣ, ಸಮಾಜದ ಮುಖಂಡರಾದ ಕೆ.ಹಾಲಪ್ಪ, ನಗರದ ಮಹಾದೇವಪ್ಪ. ಟಿ.ಎಸ್. ಮೋಹನ್, ಸುಕೇಂದ್ರಪ್ಪ, ರಾಘವೇಂದ್ರ, ಬಿ.ಎಲ್.ರಾಜಪ್ಪ, ಜಿಪಂ ಸದಸ್ಯೆ ರೇಣುಕಾ, ಹನುಮಂತಪ್ಪ, ತಾಪಂ ಅಧ್ಯಕ್ಷ ಸುರೇಶ್ ನಾಯ್್ಕ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ, ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಪಾಲಾಕ್ಷಪ್ಪ, ವೀರಶೈವ ಸಮಾಜದ ಮುಖಂಡ ಕುಮಾರಸ್ವಾಮಿ, ಬೆಣ್ಣೆ ಪ್ರವೀಣ್, ತಹಸೀಲ್ದಾರ್ ಎಂ.ಪಿ.ಕವಿರಾಜ್, ಬಿಇಒ ಉಮಾಮಹೇಶ್, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಇದ್ದರು.