ಸಮ ಸಮಾಜ ನಿರ್ಮಾಣಕ್ಕೆ ಮಹಾಪುರುಷರ ಕೊಡುಗೆ ಅಪಾರ

8 KRN-2
ಕೆ.ಆರ್.ನಗರ ತಾಲೂಕಿನ ಲಾಳಂದೇವನಹಳ್ಳಿ ಗ್ರಾಪಂನಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಎ.ಸಿ.ಧನಂಜಯ್, ಪಾರ್ವತಮ್ಮ, ಸುಮಾ, ಜಯಮ್ಮ, ಜಗದಾಂಬಾ, ಎಂ.ಡಿ.ದಾಕ್ಷಾಯಣಿ, ಜಿ.ಬಾಲಾಜಿ, ಎಸ್.ಎಂ.ಯೋಗೇಶ, ಎಸ್.ಆರ್.ವಸಂತಾ, ರಮೇಶ, ಸುಕನ್ಯಾ, ಪುಷ್ಪಾ, ಜಯಂತಿ, ಎಂ.ಟಿ.ಮಹೇಶ, ಲೋಕೇಶ್, ಎಚ್.ಆರ್.ಶಿವಕುಮಾರ್ ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ತಮ್ಮ ಕಾಯಕ ನಿಷ್ಠೆಯಿಂದ ಹೆಸರಾದ ಶಿವಶರಣರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಸಿ.ಧನಂಜಯ್ ಹೇಳಿದರು.

ತಾಲೂಕಿನ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರ ವಚನಗಳು ಹಾಗೂ ಕಾಯಕ ನಿಷ್ಠೆ ಇಂದಿಗೂ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದು ಸಮ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಿ ಮಹಾಪುರಷರ ಕೊಡುಗೆ ಅಪಾರ ಎಂದರು.

ಅಂದು ತಾವು ಮಾಡುವ ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ಕಾಯಕದಲ್ಲಿ ಕೈಲಾಸ ಕಾಣುವಂತೆ ಎಲ್ಲ ವರ್ಗದ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ದ ಕೀರ್ತಿ ಬಸವಣ್ಣರಿಗೆ ಸಲ್ಲುತ್ತದೆ. ಅಂತಹವರ ಅತ್ಯಂತ ಆತ್ಮೀಯ ಗೆಳಯನಾಗಿದ್ದ ಮಾಚಿದೇವರು ದೀನರು, ದುರ್ಬಲರು, ಶೋಷಿತರು ಹಾಗೂ ಹಿಂದುಳಿದವರ ಮೇಲೆ ಶೋಷಣೆಯ ವಿರುದ್ಧ ಧ್ವನಿ ಎತ್ತಿ ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡಗೆ ನೀಡಿದರು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ಸುಮಾ, ಸದಸ್ಯರಾದ ಜಯಮ್ಮ, ಜಗದಾಂಬಾ, ಎಂ.ಡಿ.ದಾಕ್ಷಾಯಣಿ, ಜಿ.ಬಾಲಾಜಿ, ಎಸ್.ಎಂ.ಯೋಗೇಶ, ಎಸ್.ಆರ್.ವಸಂತಾ, ರಮೇಶ, ಸುಕನ್ಯಾ, ಪುಷ್ಪಾ, ಜಯಂತಿ, ಎಂ.ಟಿ.ಮಹೇಶ, ಲೋಕೇಶ್, ಎಚ್.ಆರ್.ಶಿವಕುಮಾರ್, ಎಚ್.ಡಿ.ದಾಕ್ಷಾಯಣಿ, ಎ.ಚೌರಪ್ಪ, ಸಿ.ಎಚ್.ವಿಮಲಾ, ಎಲ್.ಪಿ.ಉಮೇಶ್, ಎಲ್.ಎಸ್.ಗುರು, ಜಯಶೀಲ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಸಿಬ್ಬಂದಿ ರಂಜಿತ್, ಮಹದೇವನಾಯಕ, ಎಂ.ಚಂದ್ರ, ಎಸ್.ಆರ್.ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net