ಶ್ರೀ ವಡೇರ ಮಠ, ವೃಂದಾವನದಲ್ಲಿ ಮಹಾಪೂಜೆ

31bkl vadera muth
Published on

ಭಟ್ಕಳ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸಾರ್ಧ ಪಂಚಶತಮಾನೋತ್ಸವದ ಪ್ರಯುಕ್ತ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾೀಶ ಶ್ರೀ ವಿದ್ಯಾೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮನ್ಯು ಸೂಕ್ತ, ಅಭಿಷೇಕ ಹಾಗೂ ಮಹಾ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಮಠವು ಸ್ಥಾಪನೆಯಾಗಿ ಮಾ.31ಕ್ಕೆ 550 ವರ್ಷ ಪೂರ್ಣಗೊಳ್ಳುತ್ತಿದೆ. ಈ ಪ್ರಯುಕ್ತ ಶ್ರೀಮಠದ ಸಂಸ್ಥಾಪನಾಚಾರ್ಯ, ಪ್ರಥಮ ಯತಿವರ್ಯರಾದ ಶ್ರೀಮದ್ ನಾರಾಯಣ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹಾಗೂ ಶ್ರೀಮದ್ ಜೀವೋತ್ತಮ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ವೃಂದಾವನ ಪ್ರಾಕಾರದಲ್ಲಿ ಸೋಮವಾರ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಶ್ರೀ ವಡೇರ ಮಠದಲ್ಲಿ ದೇವತಾ ಪ್ರಾರ್ಥನೆ, ಶ್ರೀ ವೃಂದಾವನದಲ್ಲಿ ದೇವತಾ ಪ್ರಾರ್ಥನೆ, ಭಟ್ಕಳದ ವೈದಿಕರಿಂದ ಮನ್ಯು ಸೂಕ್ತ, ವಾಯುಸ್ತುತಿ ಪಾರಾಯಣ ಪೂರ್ವಕ ವೃಂದಾವನಕ್ಕೆ ಅಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ ನಡೆಯಿತು.

11 ಗಂಟೆಯಿಂದ ಶ್ರೀ ವಡೇರ ಮಠದಲ್ಲಿ ವಿಶೇಷ ರಾಮನಾಮ ಜಪ ಅಭಿಯಾನ, ಮಹಾಸಂತರ್ಪಣೆ ನಡೆಯಿತು. ಸಂಜೆ ವೃಂದಾವನದ ಪ್ರಾಕಾರದಲ್ಲಿ ವಿಶೇಷ ರಾಮ ನಾಮ ಜಪ ಅಭಿಯಾನ ನಡೆದು ವಿಶೇಷ ಪೂಜೆ ನಡೆಯಿತು. ದಿ. ಸತ್ಯಭಾಮಾ ಮತ್ತು ದಿ. ಗೋವಿಂದ್ರಾಯ ಕಾಮತ ಸ್ಮರಣಾರ್ಥ ಕುಟುಂಬದವರು ಮಹಾ ಸಂತರ್ಪಣೆಯ ಸೇವೆ ನಡೆಸಿದರೆ, ಪ್ರದೀಪ ಜಿ. ಪೈ ಕುಟುಂಬದವರು ಉದಯಾಸ್ತಮಾನ ಸೇವೆ ನೆರವೇರಿಸಿದರು. ತಿರುಮಲ ದೇವಸ್ಥಾನದ ಶ್ರೀಸೀತಾಪತಿ ರಾಮನಾಮ ಜಪ ಕೇಂದ್ರದವರು ಪನವಾರ ಸೇವೆ ಸಲ್ಲಿಸಿದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ, ಹತ್ತು ಸಮಸ್ತರು, ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net