ಮಾ.೩೦ ರಿಂದ ಮಹಾಪ್ರಸಾದ ವಿತರಣೆ

CHANDRASHEKHAR MIJRJAPUR
CHANDRASHEKHAR MIJRJAPUR
Published on

ರಾಯಚೂರು ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳಿ ಹಿಂತಿರುಗಿ ಆಗಮಿಸುವ ಪಾದಯಾತ್ರಿಗಳಿಗೆ ಮಾ.೩೦ ರಿಂದ ಎರಡು ದಿನ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಂದು ಸಮಿತಿಯ ಸಂಚಾಲಕ ಚಂದ್ರಶೇಖರ ಮಿರ್ಜಪುರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಾದ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ನಗರದ ಹೊರವಲಯದ ಮುಗಳಖೋಟ ಮುಕ್ತಿ ಮಂದಿರದ ಶಾಖ ಮಠದಲ್ಲಿ ಆಯೋಜನೆ ಮಾಡಲಾಗಿದ್ದು,

ಮಾ.೩೦ರ ಬೆಳಗ್ಗೆ ೦೬ಬ ಗಂ ಟೆಯಿAದ ಮಾ.೩೧ರ ರಾತ್ರಿ ೧೦ ಗಂಟೆಯ ವರೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು,ಯುಗಾದಿ ಹಬ್ಬದ ನಿಮಿತ್ತ ಶ್ರೀಶೈಲ ಪಾದ ಯಾತ್ರೆ ಮುಗಿಸಿಕೊಂಡು ಬರುವ ಸುಮಾರು ೪೦ ಸಾವಿರ ಯಾತ್ರಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಜತೆಗೆ ಉಚಿತ ವೈದ್ಯಕೀಯ ತಪಾಸಣೆ ಔಷಽ ವಿತರಣೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಚನ್ನಬಸವ, ಶಂಕರಪ್ರಭು, ನಾಗಯ್ಯ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net