ಮಹಾಂತ ಸ್ವಾಮೀಜಿ ಕಾರ್ಯ ಮಾದರಿ

2Ndr1a
Published on

ನಂದೇಶ್ವರ: ಇಲ್ಲಿನ ಶ್ರೀ ಸಂಗನ ಬಸವಮಠ ಪ್ರಮುಖ ಬಸವ ಕೇಂದ್ರವಾಗಿದೆ. ಒಂದು ಗ್ರಾಮದ ಎಲ್ಲ ಸಮುದಾಯದವರನ್ನು ಒಂದೇ ಸೂರಿನಡಿ ಸೇರಿಸಿ ಅವರಲ್ಲಿ ಭಾವೈಕ್ಯ ಮೂಡಿಸುತ್ತಿರುವ ಶ್ರೇಯಸ್ಸು ಸವದಿ-ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿಗೆ ಸಲ್ಲುತ್ತದೆ.

ಸವದಿ ಮಠದ 6ನೇ ಹಾಗೂ ಇಲಕಲ್ ಮಠದ 20ನೇ ಪೀಠಾಧಿಪತಿಗಳಾದ ಗುರು ಮಹಾಂತ ಸ್ವಾಮೀಜಿ ಅವರು ಸರಳ ಹಾಗೂ ಮಾತೃ ಹೃದಯದ ಸ್ವಭಾವ ಹೊಂದಿದ್ದಾರೆ. ಲಿಂ. ಡಾ.ಮಹಾಂತ ಶಿವಯೋಗಿಗಳ ಸತ್ಕಾರ್ಯಗಳನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ಇವರು ನಿತ್ಯ ಭಕ್ತರ ಮನೆಗೆ ತೆರಳಿ ದುಶ್ಚಟಗಳನ್ನು ತ್ಯಜಿಸುವಂತೆ ತಿಳಿ ಹೇಳಿ ಸಮಾಜದಲ್ಲಿ ಒಳ್ಳೆ ವಿಚಾರಗಳನ್ನು ಬಿತ್ತರಿಸುವ ಕಾರ್ಯ ಮಾಡುತ್ತಿದ್ದಾರೆ. ರೈತರ ಜಮೀನಿಗೆ ತೆರಳಿ ನೀರನ್ನು ಹಿತಮಿತವಾಗಿ ಬಳಸಿ ಭೂತಾಯಿ ಆರೋಗ್ಯ ಕಾಪಾಡುವಂತೆ ಮನವಿ ಮಾಡುತ್ತಿದ್ದಾರೆ. ಲಿಂ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ

ದಿನವನ್ನಾಗಿ ಆಚರಿಸುವ ವಿನೂತನ ಕಾರ್ಯ ಕೈಗೊಳ್ಳುತ್ತ ಬರುತ್ತಿದ್ದಾರೆ.

ಸಮಾಜಮುಖಿ ಕಾರ್ಯ: ಅಂತಃಕರಣದ ಮಾತೃ ಹೃದಯಿ, ಸರಳ ಸಂಪನ್ನರಾದ ಪೂಜ್ಯ ಗುರುಮಹಾಂತ ಶ್ರೀಗಳು ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಶ್ರೀಗಳ ವಿದ್ಯೆ, ವಿನಯ, ವೈಜ್ಞಾನಿಕ ಮನೋಭಾವ, ಕ್ರಿಯಾಶೀಲತೆ, ದೂರದೃಷ್ಟಿ ಅನಂತವಾಗಿದ್ದು, ಅವರು ಕೈಗೊಳ್ಳುತ್ತಿರುವ ವಿನೂತನ ಕಾರ್ಯಕ್ರಮ ಸಮಾಜವನ್ನು ಸತ್ಪಥದಲ್ಲಿ ಸಾಗಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net