

ನಿಪ್ಪಾಣಿ: ತಾಲೂಕಿನ ಹುನ್ನರಗಿ ಗ್ರಾಪಂನ ಎರಡನೇ ಅವಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಮಹಾಂತೇಶ ಪಾಟೀಲ ಆಯ್ಕೆಯಾಗಿದ್ದು, ಅವಿರೋಧವಾಗಿ ಬಿಜೆಪಿ ಪಕ್ಷ ಬೆಂಬಲಿತ ಅನಿತಾ ಸುತಳೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
10 ಸದಸ್ಯರುಳ್ಳ ಗ್ರಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಮಹಾಂತೇಶ ಪಾಟೀಲ ಮತ್ತು ವಿನೋದ ಮಗದುಮ್ಮ ಅರ್ಜಿ ಸಲ್ಲಿಸಿದ್ದರು. ಮಹಾಂತೇಶ ಪಾಟೀಲ 5 ಮತ ಪಡೆದು 3 ಮತ ಪಡೆದ ವಿನೋದ ಮಗದುಮ್ಮ ವಿರುದ್ಧ ಜಯ ಸಾಸಿದ್ದಾರೆ. ಉಪಾಧ್ಯಕ್ಷೆ ಸ್ಥಾನಕ್ಕಾಗಿ ಎಸ್ಸಿ ಮಹಿಳಾ ಕೋಟಾದಿಂದ ಅನಿತಾ ಸುತಳೆ ಒಬ್ಬರೇ ಅರ್ಜಿ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ಎ.ಎಸ್. ಪೂಜಾರಿ ಘೋಷಿಸಿದರು.
ಅಧ್ಯಕ್ಷ ಮಹಾಂತೇಶ ಪಾಟೀಲ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಎನ್‌ಸಿಪಿ ಮುಖಂಡ ಉತ್ತಮ ಪಾಟೀಲ ಮಾರ್ಗದರ್ಶನದಲ್ಲಿ ಅಧ್ಯಕ್ಷನಾಗಿದ್ದು, ಎಲ್ಲ ಸದಸ್ಯರನ್ನು ವಿಶ್ವಾಸದಲ್ಲಿ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಋಷಭ ಚೌಗುಲೆ, ಸುಜಾತಾ ಕಿಲ್ಲೇದಾರ, ಭಾರತಿ ಬರಗಾಲೆ, ರೇಖಾ ಪಾಟೀಲ, ಬಿಸ್ಮಿಲ್ಲಾ ಜಮಾದಾರ್, ಅಮರ ಸ್ವಾಮಿ, ಪಿಂಟು ಜಮಾದಾರ, ಬಾಳು ಬರಗಾಲೆ, ಸಂಕೇತ ಕಿಲ್ಲೇದಾರ, ಬಸವರಾಜ ಬರಗಾಲೆ, ಮಾಣಿಕ ಪಾಟೀಲ, ಪಪ್ಪು ಕಾಂಬಳೆ, ದತ್ತಾ ಕಿಲ್ಲೇದಾರ, ವಿಠ್ಠಲ ಸುತಾರ, ಪಿಡಿಒ ಎಂ.ಪಿ. ದತವಾಡೆ ಇತರರಿದ್ದರು.