

ವಿಜಯವಾಣಿ ಸುದ್ದಿಜಾಲ ಗದಗ
ಕಲಾ ನಿಖಾಯದ ಬಹುತೇಕ ವಿದ್ಯಾಥಿರ್ಗಳು ಹಿಂಜರಿಕೆ, ಕೀಳರಿಮೆಗಳಿಂದ ಬಳಲುತ್ತಿದ್ದು ಅದರಿಂದ ಹೊರಬಂದು ತಮ್ಮ ಪ್ರತಿಭೆಯನ್ನು ಪ್ರದಶಿರ್ಸಿದ್ದಲ್ಲಿ ಉಜ್ವಲವಾದ ಭವಿಷ್ಯವಿದೆ. ಇಂತಹ ಮಹತ್ಕಾರ್ಯಕ್ಕೆ ದರ್ಶನ2023 ವಸ್ತು ಪ್ರದರ್ಶನ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ದರ್ಶನ 2023 ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನ ವಿಷಯಗಳಲ್ಲಿ ಮಾತ್ರ ಪ್ರದರ್ಶನ ಏರ್ಪಡಿಸಿರುವುದು ಇದುವರೆಗೂ ನಡೆದು ಬಂದಿರುವ ಪದ್ದತಿ. ಆದರೆ ಮಹಾವಿದ್ಯಾಲಯವು ಕಲಾ ಮತ್ತು ವಾಣಿಜ್ಯ ವಿಷಯದಲ್ಲಿಯೂ ಪ್ರದರ್ಶನ ಏರ್ಪಡಿಸಿ ಹೊಸ ಮಾದರಿಯೊಂದನ್ನು ರೂಪಿಸಿದೆ. ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವಲ್ಲಿಯೂ, ವಿದ್ಯಾಥಿರ್ಗಳಲ್ಲಿ ಭಾವೈಕ್ಯತೆ ಸಾಮರಸ್ಯ ಬೆಳಸುವಲ್ಲಿ ಇಂತಹ ಪ್ರದರ್ಶನಗಳ ಪಾತ್ರ ಹಿರಿದಾಗಿದೆ. ವಿದ್ಯಾಥಿರ್ಗಳಲ್ಲಿನ ಸೃಜನಶೀಲತೆಗೆ ಪೂರಕವಾದ ಬೆಳವಣಿಗೆ ಇದು. ಈ ದೇಶವನ್ನು ಕೇವಲ ವಿಜ್ಞಾನಿಗಳು, ವೈದ್ಯರು, ಎಂಜೀನಿಯರ್ಗಳು ಮಾತ್ರ ಕಟ್ಟಲು ಸಾಧ್ಯವಿಲ್ಲ, ಸಾಹಿತಿ, ಇತಿಹಾಸಕಾರ, ಅರ್ಥಶಾಸ್ತ್ರರೂ ಮುಖ್ಯ. ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾಥಿರ್ಗಳಿಗೂ ಉಜ್ವಲ ಭವಿಷ್ಯವಿದೆ ಎಂದರು.
ಈಶಣ್ಣ ಮುನವಳ್ಳಿ, ಡಾ. ಎ. ಕೆ. ಮಠ, ಮೃತ್ಯುಂಜಯ ಸಂಕೇಶ್ವರ, ಡಾ. ವೀಣಾ ಇ, ತೇಜಸ್ವಿನಿ ಪರ್ವತೀಕರ ಇತರರು ಇದ್ದರು.