

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳಗಾವಿ ಕೆಎಲ್ಇ ವಿಶ್ವ ವಿದ್ಯಾಲಯ, ಬಿ.ಎಂ. ಕಂಕಣವಾಡಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಕಾಲೇಜಿನ ಹಳೇ ವಿದ್ಯಾಥಿರ್ ನೀಡುವ "ಚಿಕಿತ್ಸಾ ವೈಶಿಷ್ಟ್ಯ ಪ್ರಶಸ್ತಿ'ಗೆ ನಗರದ ಪ್ರಸಿದ್ಧ ಆಯುರ್ವೇದ ತಜ್ಞ ಡಾ. ಮಹಾಂತಸ್ವಾಮಿ ಹಿರೇಮಠ ಭಾಜನರಾಗಿದ್ದಾರೆ.
ಭಾನುವಾರ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆಎಲ್ಇ ವಿವಿ ಕುಲಪತಿ ಡಾ. ನಿತಿನ್ ಗಂಗನೆ, ಪ್ರಾಚಾರ್ಯ ಡಾ. ಸುಹಾಸಕುಮಾರ ಶೆಟ್ಟಿ, ಡಾ. ಜೇಡರ, ಡಾ. ಗಜೇಂದ್ರ, ಡಾ.ರಾಜೇಂದ್ರಸ್ವಾಮಿ, ಡಾ. ರವೀಂದ್ರ ಶಿಶ್ವೆ ಹಾಗೂ ಕಾಲೇಜಿನ ಹಳೇ ವಿದ್ಯಾಥಿರ್ಗಳು ಇದ್ದರು.
26 ವರ್ಷಗಳಿಂದ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಯುರ್ವೇದ ಶಾಸ್ತ್ರ ನಿರ್ದೇಶನದ ಆಯುರ್ವೇದ ಚಿಕಿತ್ಸೆ ಮೂಲಕ ಡಾ. ಮಹಾಂತಸ್ವಾಮಿ ಹಿರೇಮಠ ಮನೆ ಮಾತಾಗಿದ್ದಾರೆ. ಶಾಲಾ ಕಾಲೇಜುಗಳಲ್ಲಿ, ಶಹರ, ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ, ಪೌರ ಕಾಮಿರ್ಕರಿಗೆ, ಜಾತ್ರೆ, ಉತ್ಸವಗಳಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸುತ್ತಾ, ತಂಬಾಕು, ಗುಟ್ಕಾ, ಸಾರಾಯಿ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ತಿಳಿವಳಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ನಗರದ ತಮ್ಮ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಬೇರೆ ಬೇರೆ ರೋಗಗಳ ಬಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಈ ಜನಪರ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.