

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ 66ನೇ ಜಾತ್ರಾ ಮಹೋತ್ಸವ ಏ. 23ರಂದು ಜರುಗಲಿದೆ.
ಏ.23 ರಂದು ವೇ.ಮೂ.ದುಂಡಯ್ಯ ಸ್ವಾಮೀಜಿ ಹಾಗೂ ಧರ್ಮದಶಿರ್ ಸಂಗಮೇಶ ಸ್ವಾಮೀಜಿ ನೇತೃತ್ವದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 6 ಗಂಟೆಗೆ ಸಹಸ್ರ ಬಿಲ್ವಾರ್ಚನೆ, 7.15ಕ್ಕೆ ಹೋಮ, 9 ಗಂಟೆಗೆ ಕಳಸಾರೋಹಣ, ಬಳಿಕ ಸಪ್ತಾಹ ಮಂಗಲ ಮತ್ತು ಗಣಾರಾಧನೆ. 12 ಗಂಟೆಯಿಂದ ಪ್ರಸಾದ ವಿತರಣೆ, ಮೈಲಾರಲಿಂಗನ ಪವಾಡಗಳು ನಡೆಯಲಿವೆ.
ಮಧ್ಯಾಹ್ನ 3 ಗಂಟೆಗೆ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 5 ಗಂಟೆಗೆ ವಿವಿಧ ವಾದ್ಯ ಮೇಳಗಳ ಸಮೇತ ಮಹಾ ರಥೋತ್ಸವ ಜರುಗಲಿದೆ.
ಏ.27 ರಂದು ಬೆಳಗ್ಗೆ ಬಯಲು ಕುಸ್ತಿ, ಸಂಜೆ 5 ಗಂಟೆಗೆ ಕಳಸಾವರೋಹಣ ನಂತರ ಕಡಬಿನ ಕಾಳಗದ ಮೂಲಕ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ. ಸುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.