ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜದ ಹರಿಕಾರರು: ಡಾ. ಗಿರಿಜಾ ಹಸಬಿ

06GDG04
ಗದಗ ಶಿವಾನಂದ ನಗರದಲ್ಲಿರುವ ಬಸವ ಮಂಟಪದಲ್ಲಿ ಭಾನುವಾರ ಜರುಗಿದ 1553ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಲಿಂ. ಮಹಾಂತ ಸ್ವಾಮಿಗಳ ಕುರಿತು ಗಿರಿಜಾ ಹಸಬಿ ಉಪನ್ಯಾಸ ನೀಡಿದರು. ಗೌರಕ್ಕ ಬಡಿಗಣ್ಣವರ, ಎಸ್​.ಎ ಮುಗದ ಹಾಗೂ ಸನ್ನಿಧಿ ಲಿಂಗದಾಳ ಮಾತನಾಡಿದರು. ಸೋಮು ಪುರಾಣಿಕ, ಮಂಗಲಾ ಕಾಮಣ್ಣವರ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಜನರಲ್ಲಿನ ದುಶ್ಚಟಗಳು ನಾಶವಾದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಅರಿತಿದ್ದ ಇಳಕಲ್​ ಲಿಂ. ಡಾ. ಮಹಾಂತ ಶಿವಯೋಗಿಗಳು "ಮಹಾಂತ ಜೋಳಿಗೆ'ಯ ಮೂಲಕ ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿ ಹರಿಕಾರರು ಅನಿಸಿಕೊಂಡರು ಎಂದು ಡಾ. ಡಿ. ಸಿ ಪಾವಟೆ ಶಿಣ ಮಹಾವಿದ್ಯಾಲಯದ ಉಪನ್ಯಾಸಕಿ ಗಿರಿಜಾ ಹಸಬಿ ಹೇಳಿದರು
ನಗರದ ಶಿವಾನಂದ ನಗರದಲ್ಲಿರುವ ಬಸವ ಮಂಟಪದಲ್ಲಿ ಭಾನುವಾರ ಜರುಗಿದ 1553ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಲಿಂ. ಮಹಾಂತ ಸ್ವಾಮಿಗಳ ಜಯಂತಿ ಅಂಗವಾಗಿ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಿರಕ್ತಮಠಗಳು ವೈದಿಕ ಪರಂಪರೆಯನ್ನೇ ಪೋಷಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಲಕಲ್​ ವಿಜಯ ಮಹಾಂತೇಶ ಮಠವನ್ನು ಬಸವತತ್ವದ ನೆಲೆಗಟ್ಟಿನಲ್ಲಿ ಕಟ್ಟಿದ ಮಹಾಂತ ಶ್ರೀಗಳು, ಬಸವಧರ್ಮದ ನಿಜಾಚರಣೆಗಳ ಪಾಲನೆಗೆ ಮಹತ್ವ ನೀಡಿದ್ದರು. ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಶ್ರೀಗಳು ಬಾಲ್ಯದಿಂದಲೂ ಆಕರ್ಷಣೀಯ ವ್ಯಕ್ತಿತ್ವ ಹೊಂದಿದ್ದರು. ಇವರ ತೇಜಸ್ಸನ್ನು ಗಮನಿಸಿದ ಸೌದಿ ಗ್ರಾಮದ ವಿರಕ್ತಮಠದ ಸಂಗನಬಸವ ಶ್ರೀಗಳು ಇವರನ್ನೇ ತಮ್ಮ ಮಠದ ಮುಂದಿನ ಪೀಠಾಧಿಪತಿ ಎಂದು ೂಷಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಕಾಶಿಗೆ ತೆರಳಿ ಸಂಸತ ಅಧ್ಯಯನ ಮಾಡಿದ ಶ್ರೀಗಳು ಯೋಗ ಸಂಗೀತದಲ್ಲೂ ಪಾರಂಗತರಾಗಿದ್ದರು ಎಂದು ಗಿರಿಜಾ ಹಸಬಿ ಹೇಳಿದರು.
ಅಧ್ಯತೆ ವಹಿಸಿದ್ದ ಎಸ್​.ಎನ್​ ಹಕಾರಿ ಮಾತನಾಡಿ, ಜನರಿಗೆ ಉಚಿತ ಇಷ್ಟಲಿಂಗ ಧಾರಣೆ ಮಾಡಿದ್ದ ಮಹಾಂತ ಶ್ರೀಗಳು ಕಲ್ಯಾಣ ಮಹೋತ್ಸವಗಳನ್ನು ಬಸವತತ್ವದ ಆಧಾರದಲ್ಲಿ ಆಚರಿಸುವ ಪದ್ಧತಿಗೆ ಮೇಲ್ಪಂಕ್ತಿ ಹಾಕಿದರು. ವಿರಕ್ತ ಮಠಾಧೀಶರು ಜಂಗಮರನ್ನೇ ಮಠಾಧೀಶರನ್ನಾಗಿಸುತ್ತಾರೆ ಎಂಬ ಆರೋಪಗಳನ್ನು ನಿವಾರಿಸಲು ತಮ್ಮ ಶಾಖಾಮಠಗಳಿಗೆ ತಳ ಸಮುದಾಯದ ಪ್ರತಿಭಾವಂತ ಯುವ ಸ್ವಾಮೀಜಿಗಳನ್ನು ಪೀಠಾಧಿಪತಿಗಳಾಗಿ ನೇಮಿಸಿದರು ಎಂದರು.
ಕಾರ್ಯಕ್ರಮದಲ್ಲಿ ವಿಭೂತಿಯ ಮಹತ್ವದ ಕುರಿತು ಗೌರಕ್ಕ ಬಡಿಗಣ್ಣವರ, ಎಸ್​.ಎ ಮುಗದ ಹಾಗೂ ಸನ್ನಿಧಿ ಲಿಂಗದಾಳ ಮಾತನಾಡಿದರು.
ಸೋಮು ಪುರಾಣಿಕ, ಮಂಗಲಾ ಕಾಮಣ್ಣವರ, ಎಂ.ಬಿ ಲಿಂಗದಾಳ, ಗಿರಿಜಕ್ಕ ಹತ್ತಿಕಾಳ, ಮೃತ್ಯುಂಜಯ ಜಿನಗಾ, ಪ್ರಕಾಶ ಅಸುಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net