

ವಿಜಯಪುರ: ಬಿಜೆಪಿ ಅಭ್ಯರ್ಥಿಗೆ ಸ್ವಾಭಿಮಾನದ ಮತ ನೀಡಿ ಗೆಲ್ಲಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ನಗರದ ವಾರ್ಡ್ ನಂ.29ರಲ್ಲಿ ಸೋಮವಾರ ಉಪ ಚುನಾವಣೆ ಪ್ರಚಾರಾರ್ಥವಾಗಿ ಅವರು ಮತ ಯಾಚಿಸಿ ಮಾತನಾಡಿದರು.
ಸದ್ಯ ಮಹಾನಗರ ಪಾಲಿಕೆಯಲ್ಲಿ ಲೂಟಿ ನಡೆದಿದ್ದು, ನಮ್ಮವರನ್ನು ಮೇಯರ್ ಮಾಡಿ ಅದನ್ನು ತಡೆಯುತ್ತೇವೆ. ಸಾಕಷ್ಟು ಅನುದಾನ ಕೂಡ ಬರುವುದಿದೆ. ಉಳಿದ ಅಭಿವೃದ್ಧಿ ಕೆಲಸಗಳನ್ನು ಮುಗಿಸಿ ನಗರವನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು ಎಂದರು.
ಅಭ್ಯರ್ಥಿ ಗಿರೀಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಕುಮಾರ ಗಡಗಿ, ಮಳುಗೌಡ ಪಾಟೀಲ, ರಾಹುಲ್ ಜಾಧವ, ವಿಠಲ ಹೊಸಪೇಟ, ಜವಾಹರ ಗೋಸಾವಿ, ಮುಖಂಡರಾದ ಚಂದ್ರಶೇಖರ ಕವಟಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಪಾಂಡು ಸಾಹುಕಾರ ದೊಡಮನಿ ಮತ್ತಿತರರಿದ್ದರು.