

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೈವಜ್ಞರ ಸಲಹೆಯಂತೆ ಸರ್ವಭಕ್ತರ ಕ್ಷೇಮಾಭಿವೃದ್ಧಿಗಾಗಿ ಬುಧವಾರ ಬೆಳಗ್ಗೆ ಗಂಟೆ 9ರಿಂದ ಮಹಾ ಮೃತ್ಯುಂಜಯ ಹಾಗೂ ನವಾಕ್ಷರೀ ಹವನ ನಡೆಯಿತು.
ಮುಂಜಾನೆ ದೇವರ ಸನ್ನಿಧಿಯಲ್ಲಿ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಬಳಿಕ ಹವನ ನಡೆಯಿತು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ವಾದಿರಾಜ ಉಪಾಧ್ಯಾಯ ಕೊಲಕಾಡಿ, ಪ್ರಸಾದ್ ಭಟ್, ಡಾ.ಶ್ರೀವತ್ಸ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿಯ ಅತುಲ್ ಕುಡ್ವ, ಸುನೀಲ್ ಆಳ್ವ, ರಾಮಚಂದ್ರ ನಾಯ್ಕ ಕೋಲ್ನಾಡು ಗುತ್ತು, ಸುಜಿತ್ ಸಾಲ್ಯಾನ್, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಉದಯಕುಮಾರ್ ಶೆಟ್ಟಿ ಆದಿದನ್, ವಿನೋದ್ ಸಾಲ್ಯಾನ್, ವಿದ್ವಾನ್ ನಾಗೇಶ್ ಬಪ್ಪನಾಡು, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.