

ವಿಜಯಪುರ : ರಾಹುಗ್ರಸ್ತ ಚಂದ್ರಗ್ರಹಣ ಅಂಗವಾಗಿ ನಗರದ ಬಿಎಲ್ಡಿಇ ಟೀಚರ್ಸ್ ಕಾಲನಿಯ ಬಿ. ಎಂ. ಪಾಟೀಲ ನಗರದ ಶಿವಾಲಯದಲ್ಲಿ ಸೋಮವಾರ ಲೋಕ ಕಲ್ಯಾಣಕ್ಕಾಗಿ ಮತ್ತು ಅಶುಭ ಫಲಗಳಿರುವ ರಾಶಿಯವರಿಗೆ ಶುಭ ಫಲ ಸಂಕಲ್ಪಿಸಿ ಫಕೀರಯ್ಯ ಶಾಸಿಗಳು ಹಾಗೂ ಸಿದ್ಧರಾಮಯ್ಯ ಶಾಸಿಗಳ ನೇತೃತ್ವದಲ್ಲಿ ಮಹಾಮೃತ್ಯುಂಜಯ ಜಪ ನಡೆಯಿತು. ಬಡಾವಣೆಯ ಸದ್ಭಕ್ತರು ಜಪದಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಗ್ರಹಣ ಮೋದ ನಂತರ ಮಹಾಶಿವನಿಗೆ ವಿಶೇಷವಾಗಿ ರುದ್ರಾಭಿಷೇಕ ನೆರವೇರಿಸಿ ಸಮಾಜದ ಒಳಿತಿಗಾಗಿ, ಸಾರ್ವಜನಿಕರ ಆಯುಷ, ಆರೋಗ್ಯ ಅಭಿವೃದ್ಧಿಗಾಗಿ ಮಹಾಮೃತ್ಯುಂಜಯ ಹೋಮ ನೆರವೇರಿಸಲಾತಯಿತು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಜಯಪುರದ ಬಿ.ಎಂ. ಪಾಟೀಲ ನಗರದ ಶಿವಾಲಯದಲ್ಲಿ ಲೋಕಕಲ್ಯಾಣ ಹಾಗೂ ಶುಭ ಫಲ ಸಂಕಲ್ಪಿಸಿ ಮಹಾಮೃತ್ಯುಂಜಯ ಜಪ ನಡೆಯಿತು.ಫಕೀರಯ್ಯ ಶಾಸಿಗಳು, ಸಿದ್ಧರಾಮಯ್ಯ ಶಾಸಿಗಳು ಮತ್ತಿತರರಿದ್ದಾರೆ.