ಮಹಾಮಾರಿ ಅಟ್ಟಹಾಸ, ಬುಧವಾರ ನಾಲ್ವರ ಸಾವು

corona
Published on

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಬುಧವಾರ ನಾಲ್ವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.

ಬೆಳಗಾವಿ ತಾಲೂಕಿನ 70 ವರ್ಷದ ವೃದ್ಧೆ, 70 ವರ್ಷದ ವೃದ್ಧ, 65 ವರ್ಷದ ವೃದ್ಧ ಮತ್ತು 30 ವರ್ಷದ ಯುವಕ ಮೃತಪಟ್ಟಿದ್ದಾರೆ. ಹೆಲ್ತ್ ಬುಲೆಟಿನ್ ಪ್ರಕಾರ, ಬುಧವಾರ ಒಂದೇ ದಿನ 293 ಮಂದಿಗೆ ಕರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,221ಕ್ಕೆ ಏರಿಕೆಯಾಗಿದೆ.

ಬೆಳಗಾವಿ ತಾಲೂಕಿನಲ್ಲಿ 188, ಗೋಕಾಕದಲ್ಲಿ 25, ಬೈಲಹೊಂಗಲದಲ್ಲಿ 22, ಚಿಕ್ಕೋಡಿಯಲ್ಲಿ 21, ಅಥಣಿಯಲ್ಲಿ 13, ಸವದತ್ತಿಯಲ್ಲಿ 12, ರಾಯಬಾಗದಲ್ಲಿ 4, ಖಾನಾಪುರ, ರಾಮದುರ್ಗದಲ್ಲಿ ತಲಾ ಮೂವರಿಗೆ ಕರೊನಾ ಸೋಂಕು ತಗುಲಿದೆ. ಅಲ್ಲದೆ, ಧಾರವಾಡ ಮೂಲದ ಇಬ್ಬರಿಗೂ ಕರೊನಾ ಸೋಂಕು ದೃಢವಾಗಿದೆ. ಬುಧವಾರ 52 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 1,162 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net