ಮಠ, ಮಂದಿರ ನೆಮ್ಮದಿ ನೀಡುವ ತಾಣ : ಪಂಜಿಗುಡ್ಡೆ ಈಶ್ವರ ಭಟ್ ಅಭಿಪ್ರಾಯ

New Project (4)
Published on

ಪುತ್ತೂರು ಗ್ರಾಮಾಂತರ: ಮನುಷ್ಯನಿಗೆ ಮಠ, ಮಂದಿರಗಳೇ ನಿಜವಾದ ನೆಮ್ಮದಿ ತಾಣಗಳು. ಬದುಕಿನಲ್ಲಿ ಎಷ್ಟೇ ಜಂಜಾಟವಿದ್ದರೂ ಒಂದಷ್ಟು ಸಮಯ ದೇವಳಕ್ಕೆ ಹೋಗಿ ಕುಳಿತು ಬಂದರೆ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಪುತ್ತೂರಿನ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಮಹಾಲಿಂಗೇಶ್ವರ ಭಕ್ತ ಸಮಿತಿ’ ರಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದಲ್ಲಿ ಮುಂದೆ ನಡೆಯಲಿರುವ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಗ್ರಾಮವಾರು ಭಕ್ತ ಸಮಿತಿ ರಚಿಸಲಾಗುತ್ತಿದೆ ಎಂದರು.

ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಕಾರ್ಪಾಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪವಿತ್ರ ರೈ, ಉಷಾ ಆಳ್ವ, ಯಾದವ ಗೌಡ, ಪ್ರಜ್ವಲ್ ರೈ ತೊಟ್ಲ, ಅರ್ಚಕ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಪವಿತ್ರ ರೈ ಬಾಳಿಲ

ಆರ್ಯಾಪು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನ ಭಕ್ತ ಸಮಿತಿ ಕಾರ್ಪಾಡಿ ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಕಾಣಿಕೆಮನೆ, ಅಧ್ಯಕ್ಷರಾಗಿ ಪವಿತ್ರ ರೈ ಬಾಳಿಲ, ಉಪಾಧ್ಯಕ್ಷರಾಗಿ ಪೂರ್ಣಿಮಾ ರೈ ಕಾರ್ಪಾಡಿ, ಬಾಬು ನಾಯ್ಕ ಕಬ್ಬಿನಹಿತ್ತು, ಸುಮಿತಾ ಶೆಟ್ಟಿ ಮೇರ್ಲ, ಭಾಗ್ಯೇಶ್ ನಾಯ್ಕ ಮೇಗಿನಪಂಜ ಮನೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್ ಭಂಡಾರಿ, ಖಜಾಂಚಿಯಾಗಿ ದಯಾನಂದ ಕರಿಮಜಲು ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net