ಬಿಎಸ್‌ವೈಗೆ ಮಹಾಲಿಂಗಪುರ ತಾಲೂಕು ಹೋರಾಟಗಾರರ ಮನವಿ

MLP-14-1A ( TALUKU
ಮಹಾಲಿಂಗಪುರ ತಾಲೂಕು ಹೋರಾಟಗಾರರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸಂಗಪ್ಪ ಹಲ್ಲಿ, ನಿಂಗಪ್ಪ ಬಾಳಿಕಾಯಿ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ ಇತರರಿದ್ದರು.
Published on

ಮಹಾಲಿಂಗಪುರ: ತಾಲೂಕು ಹೋರಾಟಗಾರರು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಬಸವರಾಜ ಹೊರಟ್ಟಿಯ ಅವರನ್ನು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದರು. ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವಾಗ ಮಾಜಿ ಸಚಿವೆ ಉಮಾಶ್ರೀ ಸಾಥ್ ನೀಡಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಸಮಿತಿಯ ನಿಂಗಪ್ಪ ಬಾಳಿಕಾಯಿ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ, ಸಿದ್ದು ಶಿರೋಳ, ರಂಗನಗೌಡ ಪಾಟೀಲ, ಶ್ರೀಮಂತ ಹಳ್ಳಿ, ಶಿವಲಿಂಗ ಟಿರಕಿ, ವೀರೇಶ ಆಸಂಗಿ, ಪರಪ್ಪ ಸತ್ತಿಗೇರಿ, ಚನ್ನಪ್ಪ ಪಟ್ಟಣಶೆಟ್ಟಿ, ಶೇಖರ ಅಂಗಡಿ, ಬಸವರಾಜ ಶಿರೋಳ, ಸುಭಾಷ ಶಿರಬೂರ, ಚಂದ್ರಶೇಖರ ಮೋರೆ, ಮಹೇಶ ಚಿಂಚಲಿ, ಸಂಜೀವ ಬಾರಕೋಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net