

ಮಹಾಲಿಂಗಪುರ: ಸದ್ಗುರುವನ್ನು ನೆನೆಯುತ್ತ ಪಾದಯಾತ್ರೆಯಲ್ಲಿ ಭಾಗವಹಿಸುವುದರಿಂದ ಚಂಚಲಿತ ಮನಸ್ಸು ಪರಿಶುದ್ಧವಾಗಿ ಆರೋಗ್ಯ ವೃದ್ಧಿಯೊಂದಿಗೆ ಮನಶಾಂತಿ ದೊರೆಯುತ್ತದೆ ಎಂದು ಸಹಜಾನಂದ ಸ್ವಾಮಿಗಳು ಹೇಳಿದರು.
ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಿಂದ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಗೆ ಸಾಗುವ ಪಾದಯಾತ್ರೆಯ ಜ್ಯೋತಿ ಯಾತ್ರೆಗೆ ಭಾನುವಾರ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.
ಕಲಬುರ್ಗಿ ಜಿಲ್ಲೆಯ ಕಡಗಂಚಿ, ಬೆಳಗಾವಿ ಜಿಲ್ಲೆಯ ಯಕ್ಸಂಬಾ, ಖಾನಟ್ಟಿ ಹಾಗೂ ಬಾಗಲಕೋಟ ಜಿಲ್ಲೆಯ ಗದ್ಯಾಳ, ಮೇಟಗುಡ್ಡ, ಸೈದಾಪುರ, ಸಂಗಾನಟ್ಟಿ, ಹೊಸೂರ, ಚಿಮ್ಮಡ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ 300ಕ್ಕೂ ಹೆಚ್ಚು ಭಕ್ತರು ಸ್ಥಳೀಯ ಮಹಾಲಿಂಗೇಶ್ವರ ದರ್ಶನ ಪಡೆದು ಅಕ್ಕಿಮರಡಿ ಮಾರ್ಗವಾಗಿ ಪ್ರಯಾಣ ಬೆಳಸಿದರು. ಯಾದವಾಡ, ಚಿಕ್ಕೊಪ್ಪ, ಚಂದರಗಿ, ಮುನ್ನೊಳ್ಳಿ, ಸವದತ್ತಿ, ಅಮ್ಮಿನಬಾವಿ, ರಾಯರ ಹೆಬ್ಬಳ್ಳಿ ಮಾರ್ಗವಾಗಿ ೆ.21ರಂದು ಹುಬ್ಬಳ್ಳಿಯ ಸಿದ್ಧಾರೂಢ ಮಠ ತಲುಪಲಿದ್ದಾರೆ.
ರನ್ನಬೆಳಗಲಿಯ ಸದಾಶಿವ ಗುರೂಜಿ, ಹೊಸೂರಿನ ಪರಮಾನಂದ ಸ್ವಾಮಿಜಿ, ಸಿದ್ದಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಡಾ.ಬಿ.ಡಿ. ಸೋರಗಾಂವಿ, ಕಾರ್ಯದರ್ಶಿ ಚಂದ್ರಶೇಖರ ಮೋರೆ, ಧರ್ಮದರ್ಶಿ ಲಕ್ಕಪ್ಪ ಚಮಕೇರಿ, ಬಾಬುರಾವ ಹಾದಿಮನಿ, ಭಕ್ತರಾದ ಪರಪ್ಪ ಹುದ್ದಾರ, ನಿರಂಜನ ದೇವಣಗಾಂವ, ಮಾರುತಿ ಇಟ್ನಾಳ, ಮುತ್ತಪ್ಪ ಸವದಿ, ಮಲ್ಲಪ್ಪ ಯಾದವಾಡ(ರೆಡ್ಡಿ), ಮಹೇಶ ಬಡಿಗೇರ, ತುಕಾರಾಮ ಮಣ್ಣಕೇರಿ, ಮಹಾದೇವ ಬ್ಯಾಳಿ, ಸುರೇಶ ಕೆಂಪವಾಡ ಇತರರು ಇದ್ದರು.
EndFragment