

ಮಹಾಲಿಂಗಪುರ: ಎಪಿಎಂಸಿ ಮಾರುಕಟ್ಟೆ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಮಹಾಲಿಂಗಪುರ ದಲಾಲ ವರ್ತಕರು ಪ್ರತಿಭಟನೆ ನಡೆಸಿ ಎಪಿಎಂಸಿ ಲೆಕ್ಕಿಗ ರವಿ ರಾಠೋಡ ಮೂಲಕ ಎಪಿಎಂಸಿ ಕಾರ್ಯದರ್ಶಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ದಲಾಲ ವರ್ತಕರ ಸಂಘದ ಅಧ್ಯಕ್ಷ ಎಂ.ಡಿ.ಧೂಪದಾಳ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಮಾರುಕಟ್ಟೆ ಶುಲ್ಕ ಹೆಚ್ಚಿಸಿರುವುದು ಎಪಿಎಂಸಿ ವ್ಯವಹಾರಗಳಿಗೆ ಕೊನೆಯ ಮೊಳೆ ಹೊಡೆಯುವ ಕಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಕಾರಿ ಇಲಾಖೆ ಅಧೀನ ಕಾರ್ಯದರ್ಶಿ ನ.15 ರಂದು ಆದೇಶ ಹೊರಡಿಸಿ ಈ ಮೊದಲು ಇದ್ದ ಸೆಸ್ 0.35 ರಿಂದ 1.0 ರಷ್ಟು ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ರೈತರಿಂದ ಕಡಿಮೆ ಬೆಲೆಗೆ ಉತ್ಪನ್ನ ಖರೀದಿಸಬೇಕಾಗುತ್ತದೆ. ಪರಿಣಾಮ ರೈತರ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗದೆ ರೈತರು ಹೈರಾಣಾಗುತ್ತಾರೆ. ಅದನ್ನು ವಿರೋಧಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಒಂದು ದಿನ ಸಾಂಕೇತಿಕವಾಗಿ ಎಪಿಎಂಸಿ ಬಂದ್ ಮಾಡುತ್ತಿದ್ದೇವೆ ಎಂದರು.
ಸಂಘದ ಸದಸ್ಯ ಚಂದ್ರು ಗೊಂದಿ ಮಾತನಾಡಿ, ಮಹಾಲಿಂಗಪುರವು ಮಹಾರಾಷ್ಟ್ರದ ಗಡಿಯಲ್ಲಿರುವ ಕಾರಣ ಇಲಿನ ಬೆಲ್ಲ ಮಹಾರಾಷ್ಟ್ರದ ಸಾಂಗಲಿಗೆ ಹೋಗುತ್ತಿದೆ. ಇಲ್ಲಿನ ಸೆಸ್ ಹೆಚ್ಚಾದ್ದರಿಂದ ರೈತರು ಸಾಂಗಲಿ ಮಾರುಕಟ್ಟೆಗೆ ಬೆಲ್ಲವನ್ನು ಕಳಿಸುತ್ತಾರೆ. ಇದರಿಂದಾಗಿ ಎಪಿಎಂಸಿ ಹಮಾಲಿ ಕಾರ್ಮಿಕರು, ಕಾರಕೂನರಿಗೆ ಉದ್ಯೋಗವಿಲ್ಲದೆ ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜತೆಗೆ ಎಪಿಎಂಸಿಗೆ ಯಾವುದೇ ಆದಾಯವು ಬರುವುದಿಲ್ಲ. ಅದಕ್ಕಾಗಿ ಎಪಿಎಂಸಿ ಹೊರಗಡೆ ವಹಿವಾಟಿಗೆ ಸೆಸ್ ಇಲ್ಲ. ಅದರಂತೆ ಮಾರುಕಟ್ಟೆಯೊಳಗೆ ಸೆಸ್‌ನ್ನು ಕೈಬಿಡಬೇಕು. ಅಂದಾಗ ಮಾತ್ರ ಎಪಿಎಂಸಿ ಒಳಗೆ ವಹಿವಾಟು ನಡೆಯುತ್ತದೆ. ಇಲ್ಲವಾದರೆ ಎಪಿಎಂಸಿಗಳು ಬಂದಾಗುವುದು ನಿಶ್ಚಿತ. ಕಾರಣ ಎಪಿಎಂಸಿಯಲ್ಲಿ ಸೆಸ್‌ನ್ನು ಕೈಬಿಟ್ಟು ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಪ್ರಕಾಶ ಕೋಳಿಗುಡ್ಡ, ಜಿ.ಜಿ. ಹುಬ್ಬಳ್ಳಿ, ಎಂ.ಪಿ.ನುಚ್ಚಿ, ಶಿವಾನಂದ ಹುಬ್ಬಳ್ಳಿ, ವಿಜಯ ಬಾಡನವರ, ಚಿಕ್ಕಪ್ಪ ಉಂಕಿ, ಮಹಾಂತೇಶ ಪಟ್ಟಣಶೆಟ್ಟಿ, ಪಂಡಿತ ಜಮಖಂಡಿ, ಗೋವಿಂದ ನಿಂಗಸಾನಿ, ಗುರುಲಿಂಗಪ್ಪ ಜಮಖಂಡಿ, ಸುನೀಲ ಕಿರಗಟಗಿ, ಅಜೀತ ಹಿರೇಕೋಡಿ, ಹಮಾಲರ ಸಂಘದ ಅಧ್ಯಕ್ಷ ಪೈಗಂಬರ್ ಪೆಂಡಾರಿ, ನೂರಸಾಬ ನದ್ಾ, ಕಾರಕೂನರ ಸಂಘದ ಅಧ್ಯಕ್ಷ ಮಹಾದೇವ ಹಿಕಡಿ, ಸಂಗಪ್ಪ ಕಾಡೇಶನವರ, ಮಹಾಲಿಂಗ ಜಿಟ್ಟಿ ಸೇರಿದಂತೆ ಹಲವರು ಇದ್ದರು.
EndFragment