

ಮಹಾಲಿಂಗಪುರ: ಮಹಾತ್ಮ ಗಾಂಧಿ ಕ್ರೀಡಾಂಗಣ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಪಟ್ಟಣದ ಕ್ರೀಡಾಭಿಮಾನಿಗಳು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕ್ರೀಡಾಪಟು ಮಹಾದೇವ ಕಡಬಲ್ಲವರ ಮಾತನಾಡಿ, ಹಿಂದಿನ ಸರ್ಕಾರ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿರುವ ಈ ಕ್ರೀಡಾಂಗಣವನ್ನು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾರ್ವಜನಿಕರ ಉಪಯೋಗಕ್ಕಾಗಿ ಕಲ್ಪಿಸಿದೆ. ಪ್ರತಿವರ್ಷ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ವಿವಿಧ ಕ್ರೀಡೆಗಳನ್ನು ಏರ್ಪಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ವಾಯುವಿಹಾರಿಗಳು ಸಹ ಈ ಕ್ರೀಡಾಂಗಣವನ್ನೇ ಅವಲಂಬಿಸಿದ್ದಾರೆ. ಮಳೆಯಿಂದ ಹಾಗೂ ಸಮೀಪದ ಕೆರೆ ವಿಸ್ತರಣೆಯಿಂದಾಗಿ ಕ್ರೀಡಾಂಗಣ ತೇವಾಂಶದಿಂದ ಕೂಡಿದ್ದು, ಆಟೋಟಕ್ಕೆ ಬಾರದಂತಾಗಿದೆ. ಇದರಿಂದ ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಾಯು ವಿಹಾರಿಗಳಿಗೆ ತೊಂದರೆಯಾಗುತ್ತಿದೆ. ತಕ್ಷಣ ಕ್ರೀಡಾಂಗಣ ಅಭಿವೃದ್ಧಿಗೊಳಿಸಿ ಗರಸಿನ ವ್ಯವಸ್ಥೆ, ತೇವಾಂಶ ನಿಯಂತ್ರಿಸಲು ಪೈಪ್‌ಲೈನ್ ಅಥವಾ ಗಟಾರ್ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ಕ್ರೀಡಾಸಕ್ತರಾದ ಯಾಸೀನ್ ಪಾಂಡು, ಕುಮಾರ ನಾಯಕ, ಹಾಜಿಸಿರಾಜ ಬನಹಟ್ಟಿ, ಬಲರಾಮ ಉಸಳಿ, ಮಹೇಶ ಶಿಂಧೆ, ಹನುಮಂತ ವಗ್ಗರ, ಮಂಜು ಕಲಾಲ, ಮೀರಾ ತಟಗಾರ ಮತ್ತಿತರರು ಇದ್ದರು.
EndFragment