ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾಗಲಿ

MLP-27-2
Published on

ಮಹಾಲಿಂಗಪುರ: ಬೆಂಗಳೂರಿನ ದೇವನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಮೂಲಕ ರಾಷ್ಟ್ರಪತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಆಲಗೂರ ಮಾತನಾಡಿ, ಅತ್ಯಾಚಾರ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ರಾಷ್ಟ್ರಪತಿ ಅವರಿಗೆ ಆಗ್ರಹಿಸಿದರು.

ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ, ಜಮೀಯತೆ ಉಲ್ಮಾ, ಭೀಮ ಆರ್ಮಿ, ಪಿ.ಎ್.ಐ. ಸೇರಿ ಅನೇಕ ಸಂಘಟನೆಗಳ ಮುಖಂಡರಾದ ಯಾಸೀನ ಅತ್ತಟಿ, ಜಾಕೀರ ಶೇಖ, ರಿಯಾಜ ಯಾದಗೂಡ, ಮಹಿಬೂಬ ಗಡ್ಡಿ, ಯೂನುಸ್ ಬೀಳಗಿ, ಗನಶೀದ ಅನಸಾರಿ, ಪರಸು ಮೇತ್ರಿ, ಚನ್ನಪ್ಪ ಮುಕ್ಕೇನ್ನವರ, ಸೈಯದ್ ನದಾಫ್, ಸಮೀರ್ ಮೌಲಾನಾ, ಗೌಸ್ ನದಾಫ್, ಹಾಜಿ ಮುಬಾರಕ ಅಲ್ಲಾಖಾನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net