ದೇಶದಲ್ಲಿ ಕೃಷಿ ಬಲಗೊಳ್ಳಲಿ

MLP-22-2
Published on

ಮಹಾಲಿಂಗಪುರ: ದೇಶದ ಅನೇಕ ಕೈಗಾರಿಕೆಗಳು ಕೃಷಿ ಆಧಾರಿತ ಕೈಗಾರಿಕೆಗಳು. ಅದಕ್ಕಾಗಿ ಕೃಷಿ ಬಲಗೊಳ್ಳಬೇಕು ತನ್ಮೂಲಕ ದೇಶ ಬಲಗೊಳ್ಳುವುದು ಎಂದು ಯೋಜನಾ ಮಂಡಳಿ ಸದಸ್ಯ ಡಾ.ಆರ್.ಆರ್. ಬಿರಾದಾರ ಹೇಳಿದರು.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಿ. ಕಲಾ, ವಿಜ್ಞಾನ, ಡಿ.ಡಿ.ಎಸ್. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ ಮತ್ತು ಕೃಷಿ ಮಾರುಕಟ್ಟೆ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ ವಿಭಾಗದ ವತಿಯಿಂದ ‘ಕೃಷಿ ಕಾಯ್ದೆಗಳು-2020’ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಎಲ್ಲರನ್ನು ಸಂತೋಷಗೊಳಿಸುವ ರೈತರಿಗೆ ಇಲ್ಲಿ ಸಂತೋಷವಿಲ್ಲ. ಕೃಷಿಕರ ಆದಾಯ ಕಡಿಮೆಯಿದ್ದು, ಕೃಷಿಯೇತರ ಆದಾಯ ಹೆಚ್ಚಿದೆ. ರೈತರ ಜೀವನ ವೆಚ್ಚ ಹೆಚ್ಚಾಗುತ್ತಿದೆ ಎಂದರು.

ತೇರದಾಳದ ಪ್ರಗತಿಪರ ರೈತ ದರೆಪ್ಪ ಕಿತ್ತೂರ ಮಾತನಾಡಿ, ನಾನು ಕೃಷಿಯಲ್ಲಿ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದೇನೆ. ಅದರ ಜತೆಗೆ ಹೈನುಗಾರಿಕೆಗೂ ಪ್ರಾಶಸ್ತ್ಯ ನೀಡಿದ್ದೇನೆ ಎಂದರು.

ಪ್ರಾಚಾರ್ಯ ಡಾ.ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಕೆ.ಎಂ. ಅವರಾದಿ, ಸಂಘಟನಾ ಕಾರ್ಯದರ್ಶಿ ಡಾ.ಎಸ್.ಡಿ. ಸೋರಗಾಂವಿ, ಸಹ ಕಾರ್ಯದರ್ಶಿ ಜಿ.ಎನ್.ಪಾಟೀಲ ಹಲವರು ಇದ್ದರು. ಮಹಾದೇವಿ ದಡ್ಡಿಮನಿ, ರಾಜೇಂದ್ರ ನಾವಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net