

ಮಹಾಲಿಂಗಪುರ: ಕರೊನಾ ನಂತರ ತಗುಲುವ ಬ್ಲಾೃಕ್ ಂಗಸ್ ಗುಣಪಡಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡಲೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಸರ್ಕಾರಕ್ಕೆ ಒತ್ತಾಯಿಸಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಆಗಮಿಸಿದ ಸಾರ್ವಜನಿಕರಿಗೆ ಕಾಂಗ್ರೆಸ್ ಪಕ್ಷದಿಂದ ಉಚಿತ ಉಪಾಹಾರ ವಿತರಿಸಿ ಅವರು ಮಾತನಾಡಿದರು.
ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಆಗಿದೆ. ಬ್ಲಾೃಕ್ ಂಗಸ್‌ಗೆ ಲೈಪೊಸೋಮಲ್ ಆ್ಯಂಪೋಟೆರಿಸಿನ್ ಬಿ ಚುಚ್ಚುಮದ್ದು ಬಹಳ ಅವಶ್ಯ. ಅದರ ಲಭ್ಯತೆ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ಸರ್ಕಾರ ಏನು ಮಾಡುತ್ತಿದೆ. ಮಂಗಳವಾರದವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ 20 ಅಧಿಕೃತ ಬ್ಲಾೃಕ್ ಂಗಸ್ ಕೇಸ್‌ಗಳಿವೆ. ಇಂಜೆಕ್ಷನ್ ಇಲ್ಲದೆ ನೀವು ಉಪಚಾರ ಹೇಗೆ ಮಾಡ್ತೀರಿ. ಅದನ್ನು ತರಿಸುವುದು ಸರ್ಕಾರದ ಕೆಲಸ. ನೆಪ ಹೇಳುವುದಲ್ಲ. ಕೂಡಲೇ ಸರ್ಕಾರ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಿಗೆ ಬ್ಲಾೃಕ್ ಂಗಸ್ ಚುಚ್ಚುಮದ್ದು ವಿತರಿಸಬೇಕು ಎಂದು ಆಗ್ರಹಿಸಿದರು.
ಕಣ್ಣು ಮನುಷ್ಯನಿಗೆ ಮೂಲ ಆಧಾರ. ಬ್ಲಾೃಕ್ ಂಗಸ್ ಕಣ್ಣಿಗೆ ಹೆಮ್ಮಾರಿಯಾಗಿದೆ. ರೋಗಿಗಳು ಸಾಯಬಾರದು. ಅದಕ್ಕಾಗಿ ನಮ್ಮ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ನಾವು ಸರ್ಕಾರಕ್ಕೆ ಒತ್ತಡ ತರುತ್ತೇವೆ. ಶಾಸಕರು ಕೂಡ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಿ. ಮಹಾಮಾರಿ ವಿರುದ್ಧದ ಸೆಣಸಾಟದಲ್ಲಿ ಸರ್ಕಾರದೊಂದಿಗೆ ನಾವು ಕೈಜೋಡಿಸುತ್ತೇವೆ ಎಂದರು.
ರಬಕವಿ-ಬನಹಟ್ಟಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಸದಸ್ಯರಾದ ಜಾವೇದ್ ಬಾಗವಾನ, ಬಸವರಾಜ ಬುರುಡ, ರಾಜು ಗೌಡಪ್ಪಗೋಳ ಮುಖಂಡರಾದ ರಾಜು ಭಾಂವಿಕಟ್ಟಿ, ಸೈಯ್ಯದ್ ಯಾದವಾಡ, ಪ್ರಕಾಶ ಮಮದಾಪುರ, ಲಕ್ಷ್ಮಣ ಮಾಂಗ, ಅರ್ಜುನ ದೊಡಮನಿ, ಶಂಕರ ಸೊನ್ನದ, ನಾರಾಯಣ ಜೋಶಿ, ಮಲ್ಲು ಪಾಶ್ಚಾಪುರ, ಮುದಕಪ್ಪ ನಿಂಗನೂರ ಇದ್ದರು.
ನಾವು ವಿರೋಧ ಪಕ್ಷದಲ್ಲಿದ್ದು, ಸರ್ಕಾರಕ್ಕೆ ಸಲಹೆ ನೀಡುವ ಮೂಲಕ ಜನತೆಯ ಅಭ್ಯುದಯ ಬಯಸುವುದು ನಮ್ಮ ಕರ್ತವ್ಯ. ಅಧಿಕಾರ ಇಲ್ಲವೆಂದು ನಾವು ಸುಮ್ಮನೆ ಕೂಡುವುದಕ್ಕೆ ಆಗುವುದಿಲ್ಲ. ನಾವು ಸಲಹೆ ನೀಡಿದರೆ ಅದಕ್ಕೆ ರಾಜಕೀಯ ಮಾಡುತ್ತಿದ್ದಾರೆ ಅಂತಾರೆ. ನಾನು ಸೋತಿರಬಹುದು. ಆದರೆ, ನನಗೆ ಬದ್ಧತೆ ಇದೆ.
- ಉಮಾಶ್ರೀ ಮಾಜಿ ಸಚಿವೆ