

ಮಹಾಲಿಂಗಪುರ: ಕೇಂದ್ರ ಸರ್ಕಾರದ ಯುಜಿಸಿ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಲಾಗಿದ್ದು, ಇಂದಿಲ್ಲಿ ಪುರುಷರ ಮುಕ್ತ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಮೊದಲನೇ ಪಂದ್ಯಾವಳಿ ನಡೆಯುತ್ತಿರುವುದು ಹರ್ಷದಾಯಕ ಎಂದು ಪ್ರಾಚಾರ್ಯ ಡಾ.ಬಿ.ಎಂ. ಪಾಟೀಲ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಿ. ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಕ್ಲಬ್ ಮಹಾಲಿಂಗಪುರ ಹಾಗೂ ಕೆ.ಎಲ್.ಇ. ಸಂಸ್ಥೆಯ ಎಸ್.ಸಿ.ಪಿ. ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪುರುಷರ ಮುಕ್ತ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕಾಲೇಜು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಅದರ ಹಿಂದೆ ವಿ.ಎಸ್.ಅಂಗಡಿ, ಎ.ಎಂ.ಉಗಾರೆ, ಆರ್.ಎಸ್.ಪೂಜಾರಿ ಅವರ ಪರಿಶ್ರಮವಿದೆ ಎಂದರು. ರಾಜ್ಯದ ವಿವಿಧ ಭಾಗಗಳಿಂದ 32 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯ ಸಂತೋಷ ಹುದ್ದಾರ, ಪಿಯು ಕಾಲೇಜು ಪ್ರಾಚಾರ್ಯ ಡಿ.ಬಿ. ಕೋಳಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಸ್. ಈಶ್ವರಪ್ಪಗೋಳ, ದೈಹಿಕ ಶಿಕ್ಷಣ ನಿರ್ದೇಶಕ ವಿ.ಎಸ್. ಅಂಗಡಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಕ್ರೀಡಾ ವಿಭಾಗದ ಸಹಾಯಕರಾದ ಎ.ಎಂ. ಉಗಾರೆ, ಆರ್.ಎಸ್.ಪೂಜಾರಿ, ನ್ಯಾಕ್ ಸಂಯೋಜಕ ಎಂ.ಜಿ.ಯರನಾಳ, ಐಕ್ಯೂಎಸಿ ಸಂಯೋಜಕ ಡಾ.ಕೆ.ಎಂ.ಅವರಾದಿ, ಸಂಘಟಕ ಎಸ್.ಎಸ್. ಹಳಿಂಗಳಿ, ಬಿ.ಎಂ. ಸಿದ್ನಾಳ ಹಲವರು ಇದ್ದರು.
EndFragment