

ಮಹಾಲಿಂಗಪುರ: ಸ್ಥಳೀಯ ರಬಕವಿ ರಸ್ತೆಯ ಮರೆಗುದ್ದಿ ಪ್ಲಾಟಿನಲ್ಲಿರುವ ದಾನಮ್ಮದೇವಿ ಜಾತ್ರೆ ಗುರುವಾರ ಅದ್ದೂರಿಯಾಗಿ ಜರುಗಿತು.
ದೇವಿ ಜಾತ್ರೆ ನಿಮಿತ್ತ ಸಾವಿರಾರು ಮುತೈದೆಯರಿಗೆ ಉಡಿ ತುಂಬಲಾಯಿತು. ಜನರು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಗಣ್ಯರಾದ ಶೇಖರ ಅಂಗಡಿ, ಬಸವರಾಜ ಪಾಶ್ಚಾಪೂರ, ಸಿದ್ದು ಶಿರೋಳ, ಡಾ.ಅಶೋಕ ದಿನ್ನಿಮನಿ, ರಾಚಪ್ಪ ಕಡೆಬಾಗಿಲ, ಚಿದಾನಂದ ಚಿಂದಿ, ದುಂಡಪ್ಪ ಬಂಡಿ, ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಈಶ್ವರ ಮಠಪತಿ, ಮಹೇಶ ಸವದಿ, ಪ್ರಭು ಕುಳ್ಳೊಳ್ಳಿ, ಎಸ್.ಬಿ.ಮಠಗಾರ, ಜಿ.ಎ.ಮಠಪತಿ, ಚೇತನ ಸುಣದೊಳಿ, ಪ್ರಶಾಂತ ಅಂಗಡಿ, ಬಸು ಪರಿಟ್, ದಯಾನಂದ ಕಲ್ಲೇದ, ಅರ್ಜುನ ಪವಾರ, ಬಸು ಹೊಳಗಿ ಇದ್ದರು.