ಸಂಭ್ರಮ ಹೆಚ್ಚಿಸಿದ ಮಹಾಲಕ್ಷ್ಮೀದೇವಿ ಜಾತ್ರೋತ್ಸವ

12KHANAPUR1
Published on

ಖಾನಾಪುರ: ತಾಲೂಕಿನ ಸಣ್ಣಹೊಸೂರು ಮತ್ತು ಭಂಡಾರಗಾಳಿ ಗ್ರಾಮಗಳಲ್ಲಿ 14 ವರ್ಷಗಳ ನಂತರ ಮಹಾಲಕ್ಷ್ಮೀ ಜಾತ್ರೆ ಬುಧವಾರ ಆರಂಭವಾಗಿದ್ದು, ಒಂಬತ್ತು ದಿನಗಳ ಕಾಲ ನಡೆಯಲಿದೆ.

ಮಹಾಲಕ್ಷ್ಮೀ ಮತ್ತು ಹನುಮಾನ ದೇವಸ್ಥಾನದಲ್ಲಿ ದೇವಿಯ ವಿವಾಹ ಸಮಾರಂಭ ನಡೆಯಿತು. ವೀಕ್ಷಣೆಗಾಗಿ ಭಕ್ತರಿಗೆ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ವಿಠ್ಠಲ ಹಲಗೇಕರ ಮತ್ತವರ ಪತ್ನಿ ರುಕ್ಮಿಣಿ, ಲೈಲಾ ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಶಂಕರ ಪಾಟೀಲ, ಅಬಾಸಾಹೇಬ್ ದಳವಿ, ಗೋಪಾಲರಾವ ದೇಸಾಯಿ, ರಾಜು ಸಿದ್ಧಾನಿ ಇದ್ದರು. ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಸಣ್ಣಹೊಸೂರು ಮಹಾಲಕ್ಷ್ಮೀದೇವಿಯ ದರ್ಶನ ಪಡೆದರು.

ದೇವಿಯ ವಿವಾಹ ಸಮಾರಂಭವು ಸಂಭ್ರಮದೊಂದಿಗೆ ಪ್ರಾರಂಭವಾಯಿತು. ಜತೆಗೆ ಭಂಡಾರದ ಅರ್ಪಣೆಯೂ ನಡೆಯಿತು. ದೇವಿ ತನ್ನ ಮನೆಯಾದ ಭಂಡಾರ್ಗಡಿಗೆ ಆಗಮಿಸಿದಳು. ಅಲ್ಲಿ ಗ್ರಾಮದ ಪರವಾಗಿ ಕಾರ್ಯಕ್ರಮ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net