ಮಹಿಳೆ ಮನೆ ಬೆಳಗುವ ಮಹಾಲಕ್ಷ್ಮೀ

09 ylp 03 (arishina)
Published on

ಯಲ್ಲಾಪುರ ಮಹಿಳೆ ಮುಗ್ಧತೆಯಿಂದ ಸ್ವತಂತ್ರತೆಯತ್ತ ಹೆಜ್ಜೆ ಇಟ್ಟು ಸ್ವಾವಲಂಬಿಯಾಗಿದ್ದರೂ ಅವಳು ಎಂದೆಂದಿಗೂ ಮನೆ ಬೆಳಗುವ ಮಹಾಲಕ್ಷ್ಮೀಯಾಗಿದ್ದಾಳೆ ಎಂದು ಸಾಹಿತಿ ಶಿವಲೀಲಾ ಹುಣಸಗಿ ಹೇಳಿದರು.


ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ವಿಹಿಂಪ ಮಾತೃ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಅರಿಷಿಣ- ಕುಂಕುಮ ಕಾರ್ಯಕ್ರಮವು ನಮ್ಮ ಸಂಸ್ಕೃತಿಯ ಸಕಾರಾತ್ಮಕ ಮೌಲ್ಯವನ್ನು ಪಸರಿಸುವ ಕಾರ್ಯವಾಗುತ್ತಿದೆ ಎಂದರು.
ವಿದ್ವಾನ ಅನಂತ ಭಟ್ಟ ಸಿದ್ರಪಾಲ ಮಾರ್ಗದರ್ಶನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ, ಲಲಿತಾ ಸಹಸ್ರನಾಮ ಪಠಣ ನಡೆಯಿತು.
ಡಾ. ಸ್ವಪ್ನಾ ಪಂಡಿತ ಹಾಗೂ ರಾಘವೆಂದ್ರ ವೃದ್ಧಾಶ್ರಮದ ಮೇಲ್ವಿಚಾರಕಿ ಅಕ್ಷತಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಗ್ರಾಮದೇವಿಗೆ ಸಮಿತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಉಡಿ ತುಂಬಲಾಯಿತು.


ಮೀರಾ ನಾಯ್ಕ, ವೀಣಾ ಯಲ್ಲಾಪುರಕರ, ಹಿಂದು ಜಾಗರಣಾ ವೇದಿಕೆ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವಕರ, ಪ್ರಮುಖರಾದ ಪ್ರಮೋದ ಹೆಗಡೆ, ರಾಮು ನಾಯ್ಕ, ನಾರಾಯಣ ನಾಯಕ, ಸರಿತಾ ಮುರಕುಂಬಿ ಉಪಸ್ಥಿತರಿದ್ದರು.
ಶಶಿಕಲಾ ಅಂಬಿಗ, ಸಾಕ್ಷಿ ಮುರಕುಂಬಿ, ಮಂಡಳಿಯ ಕಾರ್ಯದರ್ಶಿ ಶ್ಯಾಮಿಲಿ ಪಾಟಣಕರ್, ಶೋಭಾ ಹುಲಮನಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net