

ಸಿರವಾರ ಐತಿಹಾಸಿಕ ಪ್ರಸಿದ್ಧ ತಾಲೂಕಿನ ಕಲ್ಲೂರಿನ ಮಹಾಲಕ್ಷ್ಮಿ ದೇವಸ್ಥಾನದ ಬೀಗ ಮುರಿದು ಅಪಾರ ಪ್ರಮಾಣದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಬುಧವಾರ ಮಧ್ಯರಾತ್ರಿ ಜರುಗಿದೆ.
ಮಹಾಲಕ್ಷ್ಮಿ ದೇವಿಯ ಮೈಮೇಲಿದ್ದ ಸುಮಾರು ೨೫ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಳವು ಮಾಡಿz್ದÁರೆ. ಈ ಪೈಕಿ ೮೦ ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ ಕಿರೀಟ, ೩೦ ಗ್ರಾಂ ತೂಕದ ಲಕ್ಷ್ಮಿ ಕಿರೀಟ, ೧೪೦ ಗ್ರಾಂ ಪಾದಗಳು, ೪೦ ಗ್ರಾಂ ಪದಕ ಸೇರಿ ೨೯೦ ಗ್ರಾಂ ಚಿನ್ನಾಭರಣ ದೋಚಿz್ದÁರೆ.
ಇಷ್ಟೆ¯್ಲÁ ಮೌಲ್ಯದ ಚಿನ್ನಾಭರಣವಿದ್ದರೂ ದೇವಸ್ಥಾನದ ಆಡಳಿತ ಮಂಡಳಿ ಸಿಸಿ ಕ್ಯಾಮೆರಾ ಅಳವಡಿಸಿರಲಿಲ್ಲ. ಹೀಗಾಗಿ ಕಳ್ಳರು ಸುಲಭವಾಗಿ ದೇವಾಲಯಕ್ಕೆ ನುಗ್ಗಿ ಚಿನ್ನಾಭರಣ ಕಳವು ಮಾಡಿz್ದÁರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಎಂ.ಪುಟ್ಟಮಾದಯ್ಯ,ಹೆಚ್ಚುವರಿ ಪೊಲೀಸ್ ಅಽÃಕ್ಷಕ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿz್ದÁರೆ.
ಈ ಕುರಿತು ಸಿರವಾರ ಪೊಲೀಸï ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.