

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗೋಕಾಕ ನಗರದಲ್ಲಿ ನಡೆಯುತ್ತಿರುವ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಭವ್ಯ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು.
ನಗರದ ಹೊರವಲಯದಲ್ಲಿ ಏರ್ಪಡಿಸಿದ್ದ ಸ್ಪರ್ಧೆಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಚಾಲನೆ ನೀಡಿದರು. ಶರ್ಯತ್ತು ನೋಡಲು ಜನಸ್ತೋಮವೇ ನೆರೆದಿತ್ತು. ಸ್ಪರ್ಧೆಯಲ್ಲಿ ಪ್ರಥಮ 5 ಲಕ್ಷ ರೂ. ನಗದು ಬಹುಮಾನವನ್ನು ಯರಟ್ಟಿಯ ಅಜೀತ ದೇಸಾಯಿ, ದ್ವಿತೀಯ 3 ಲಕ್ಷ ರೂ. ಬಹುಮಾನವನ್ನು ನಿಖಿಲ್ ದೇಸಾಯಿ ಪಡೆದರು.
ನಗರದ ಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಯುವ ಮುಖಂಡ ಅಮರನಾಥ ಜಾರಕಿಹೊಳಿ, ಟಿ.ಆರ್.ಕಾಗಲ, ಅಶೋಕ ಪೂಜಾರಿ, ಜಾತ್ರಾ ಕಮಿಟಿಯ ಪ್ರಭು ಚೌವ್ಹಾಣ, ಅಡಿವೆಪ್ಪ ಕಿತ್ತೂರ, ದಸ್ತಗೀರ ಕೋತವಾಲ ಇತರರಿದ್ದರು.