

ಚಿಕ್ಕೋಡಿ: ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಮಹಾಲಕ್ಷ್ಮೀದೇವಿ ಜಾತ್ರೆಯನ್ನು ಫೆ. 14 ರಂದು ಆಯೋಜಿಸಲಾಗಿದೆ. ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಅವರ ಪ್ರೋತ್ಸಾಹದಿಂದ, ಅಧ್ಯಕ್ಷ ಅಮಿತ ಕೋರೆ, ಉಪಾಧ್ಯಕ್ಷ ಸಂದೀಪ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಟಿ. ದೇಸಾಯಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫೆ. 14ರಂದು ಲಕ್ಷ್ಮೀ ದೇವಿಯ ಅಭಿಷೇಕ, ಉಡಿತುಂಬುವುದು, ಅಂಬಲಿಕೊಡ ತರುವುದು ಹಾಗೂ ಮಧ್ಯಾಹ್ನ 3 ಗಂಟೆಗೆ ಮಹಾಪ್ರಸಾದ ನಂತರ ಲಕ್ಷ್ಮೀ ದೇವಿಯ ಮೆರವಣಿಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ಬೆಳಗ್ಗೆ ಕುದುರೆ ಸ್ಪರ್ಧೆ, ಎತ್ತು ಹಿಡಿದುಕೊಂಡು ಓಡುವ ಸ್ಪರ್ಧೆ, ಸೈಕಲ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಾತ್ರಾ ಕಮಿಟಿಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.