ಮಹಾಲಕ್ಷ್ಮೀ ಅಮ್ಮನವರ ಜಾತ್ರೆ ಸಂಪನ್ನ

RemasterDirector_1a5c03258
ಅಬ್ಬೂರು ಬಡಾವಣೆಯಲ್ಲಿರುವ ಶ್ರೀದೇವಿ ಮಹಾಲಕ್ಷ್ಮೀ ಅಮ್ಮನವರ ದೇವಾಲಯದಲ್ಲಿ ದೇವಿಯ ಜಾತ್ರಾ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.
Published on

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯ ಅಬ್ಬೂರು ಬಡಾವಣೆಯಲ್ಲಿರುವ ಶ್ರೀದೇವಿ ಮಹಾಲಕ್ಷ್ಮೀ ಅಮ್ಮನವರ ದೇವಾಲಯದಲ್ಲಿ ದೇವಿಯ ಜಾತ್ರಾ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.

ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಮ್ಮನವರಿಗೆ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸಮೀಪದ ದೇವಿ ಕೆರೆಯಿಂದ ಗಂಗಾ ಪೂಜೆ ಮಾಡಿಸಿ ಮುಂಜಾನೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಲಕ್ಷ್ಮೀ ಹೃದಯ ಹೋಮ, ಕಲಾಹೋಮ ನೆರವೇರಿತು.

ವಿಶೇಷ ಅಲಂಕಾರದ ಶ್ರೀಚಕ್ರ ಪೀಠದಲ್ಲಿ ವಿರಾಜಮಾನಳಾಗಿದ್ದ ದೇವಿಗೆ ಮಂಗಳಾರತಿ ಸಲ್ಲಿಸದ ಬಳಿಕ ಶುಭ ವೃಷಭ ಲಗ್ನದಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವಿಶೇಷ ಅಲಂಕಾರಗಳೊಂದಿಗೆ ರಾಜಬೀದಿ ಉತ್ಸವ ನಡೆಸಲಾಯಿತು.

ಸಂಜೆ ಅಮ್ಮನವರ ಬ್ರಹ್ಮೋತ್ಸವ ದೇವಿ ಕೆರೆಯಿಂದ ಪ್ರಾರಂಭವಾಗಿ ಬ್ರಹ್ಮಕಲಶ ದೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಸಹಿತ ಬಂದು ದೇವಾಲಯದ ಮುಂಭಾಗ ಸಿದ್ಧಪಡಿಸಿದ್ದ ಅಗ್ನಿಕೊಂಡ ತುಳಿಯುವ ಮೂಲಕ ಕೊಂಡೋತ್ಸವ ಪೂಜೆ ನೆರವೇರಿಸಲಾಯಿತು.

ಶನಿವಾರ ಬೆಳಗ್ಗೆ ಅಮ್ಮನವರಿಗೆ ಅಶ್ವವಾಹನೋತ್ಸವ, ಶ್ರೀ ಹಿರಿಯಮ್ಮ ಪಟ್ಟಲದಮ್ಮನವರ ಹರಿಸೇವೆ ನಡೆಸಲಾಯಿತು. ಪೂಜಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಸ್ಥಾನದ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.

ದೇವಸ್ಥಾನದ ಟ್ರಸ್ಟಿಗಳಾದ ಚಿಕ್ಕಮ್ಮ, ದೀಪು, ಮಹಾಲಕ್ಷ್ಮೀ, ಕೆ.ಕೆ.ಶಶಿ, ಟಿ.ಸಿ.ಹರೀಶ್, ರವಿ, ಚಂದ್ರು, ಪ್ರಕಾಶ್ ಸಿಂಗ್, ಮುಖಂಡರಾದ ಮಹಾದೇವ, ಯಶ್ವಂತ್, ರಾಝಾಕ್, ವಿಜೇಂದ್ರ, ರಾಮಲಿಂಗಯ್ಯ, ಸಾಕಮ್ಮ, ಕುಸುಮಾ, ಪದ್ಮಾ, ಸುನೀತಾ, ಗೀತಾ ಮತ್ತಿತರರು ಇದ್ದರು.

22.ಥಿಠಿ.01: ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯ ಅಬ್ಬೂರು ಬಡಾವಣೆಯಲ್ಲಿರುವ ಶ್ರೀದೇವಿ ಮಹಾಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net