ಜ.25ರಿಂದ ಗೋದ್ರಿಯಲ್ಲಿ ಮಹಾಕುಂಭ

PHOTO-3 (1)-1
Published on

ಚಿತ್ರದುರ್ಗ

ಅಖಿಲ ಭಾರತೀಯ ಬಂಜಾರ ಮತ್ತು ಲಬಾನಾ ಸಮಾಜ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಗೋದ್ರಿಯಲ್ಲಿ ಜ.25ರಿಂದ 30 ರವರೆಗೆ ಆಯೋಜಿಸಿರುವ ಮಹಾಕುಂಭ-2023ರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಎರಡು ಸಾವಿರಕ್ಕೂ ಹೆಚ್ಚು ಲಂಬಾಣಿ ಸಮುದಾಯದವರು ಭಾಗವಹಿಸುತ್ತಿದ್ದಾರೆ ಎಂದು ಬಂಜಾರ ಮಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

ಗುರುಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಕುಂಭದ ಪ್ರಾಂತ ಸಮಿತಿ ಸಭೆಯಲ್ಲಿ ಮಾತನಾಡಿ, ಈ ಕುಂಭದಲ್ಲಿ ದೇಶ, ವಿದೇಶಗಳಿಂದ 8-10 ಲಕ್ಷ ಜನರು ಭಾಗವಹಿಸಲಿದ್ದಾರೆ. ಅನ್ಯ ಸಂಸ್ಕೃತಿಯಿಂದ ಭಾಷೆ, ಆಚಾರ, ವಿಚಾರಗಳ ಮೇಲೆ ಪೆಟ್ಟು ಬೀಳುತ್ತಿದೆ. ಧಾರ್ಮಿಕ ತಳಹದಿ ಬಂಜಾರ ಸಮುದಾಯ ಸಂಘಟಿತವಾಗಬೇಕಿದೆ ಎಂದರು.

ಬಂಜಾರ ಸಮಾಜದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಳಿಸಲಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಸಮುದಾಯದವರಲ್ಲಿ ಜಾಗೃತಿಮೂಡಿಸ ಬೇಕಿದೆ ಎಂದು ಹೇಳಿದರು.

ಚಿತ್ರದುರ್ಗ ತಾಪಂ ಮಾಜಿ ಸದಸ್ಯ ಸುರೇಶ್‌ನಾಯ್ಕ ಮಾತನಾಡಿ, ಹಣದ ಆಮಿಷವೊಡ್ಡಿ ಮತಾಂತರ ಮಾಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಂಜಾರ ಸಮುದಾಯಕ್ಕೆ ತನ್ನದೆ ಆದ ಕಲೆ ಸಂಸ್ಕೃತಿ, ಆಚಾರ ವಿಚಾರಗಳಿದೆ. ಮತಾಂತರವಾಗಿರುವ ಮೂಲ ಧರ್ಮಕ್ಕೆ ಮರಳಬೇಕೆಂದು ಮನವಿ ಮಾಡಿದರು.

ಮುಖಂಡ ಡಾ.ಮೋಹನ್ ಮಾತನಾಡಿ, ಮತಾಂತರಕ್ಕಾಗಿ ವಿದೇಶಗಳಿಂದ ಕೋಟ್ಯಂತರ ರೂ. ಹರಿದುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಧರ್ಮ ಪ್ರಚಾರಕ ತುಳಸಿನಾಯ್ಕ, ಜಯಸಿಂಹ ಕಾಟ್ರೋತ್, ಗುರುಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net