ಮಹಾಜನ ಕಾಲೇಜು ತಂಡ ‘ಟೀಂ ಚಾಂಪಿಯನ್’

32
Published on

ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಂತರ ವಲಯ ಪುರುಷರ ವಿವಿಧ ಗುಂಪು ಸ್ಪರ್ಧೆಗಳ ಕ್ರೀಡಾಕೂಟದಲ್ಲಿ ಸಾರ್ವಭೌಮ ಸಾಧಿಸಿದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡ ‘ಟೀಂ ಚಾಂಪಿಯನ್’ ಪಟ್ಟ ತನ್ನದಾಗಿಸಿಕೊಂಡಿತು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಒಟ್ಟು 22 ಅಂಕಗಳೊಂದಿಗೆ ‘ತಂಡ ಸಮಗ್ರ’ ಪ್ರಶಸ್ತಿ ಪಡೆಯಿತು. ಅಂತೆಯೇ 18 ಅಂಕಗಳೊಂದಿಗೆ ಮಹಾರಾಜ ಕಾಲೇಜು ತಂಡ ದ್ವಿತೀಯ ಹಾಗೂ 13 ಅಂಕಗಳಿಸಿದ ಮೈಕಾ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು.

ಮೈಸೂರು ವಿವಿಯ ಸ್ಪೋರ್ಟ್ಸ್ ಪೆವಿಲಿಯನ್‌ನ ಒಳಾಂಗಣದಲ್ಲಿ ಶುಕ್ರವಾರ ಬಹುಮಾನ ವಿತರಣಾ ಸಮಾರಂಭ ನೆರವೇರಿತು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ್, ಪತ್ರಕರ್ತ ಅಂಶಿ ಪ್ರಸನ್ನ, ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಸಿ.ವೆಂಕಟೇಶ್, ಉಪ ನಿದೇರ್ಶಕ ಡಾ.ಪಿ.ಕೃಷ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net