22ರಂದು ಮಹಾಗೌರಿ ಮೂರ್ತಿ ಪ್ರತಿಷ್ಠಾಪನೆ

17-msk-1
Published on

ಮಸ್ಕಿ: ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಪ್ರತಿಷ್ಠಾಪನೆ ಮಾಡಲು ನಿರ್ಮಾಣ ಮಾಡಿರುವ ಮಹಾಗೌರಿ ಮೂರ್ತಿಯನ್ನು ಗುರುವಾರ ಮೆರವಣಿಗೆ ಮೂಲಕ ಭ್ರಮರಾಂಬ ದೇವಸ್ಥಾನದಿಂದ ಗಚ್ಚಿನ ಹಿರೇಮಠಕ್ಕೆ ತರಲಾಯಿತು. ನೂರಾರು ಮಹಿಳೆಯರು ಕುಂಭ-ಕಳಸದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭ್ರಮರಾಂಬ ದೇವಸ್ಥಾನದಲ್ಲಿ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಆ.22ರಂದು ಬ್ರಾಹ್ಮಿ ಮಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ಪ್ರಮುಖರಾದ ಪಂಚಾಕ್ಷರಯ್ಯ ಕಂಬಾಳಿಮಠ, ಸಿದ್ದಲಿಂಗಯ್ಯ ಗಚ್ಚಿನ ಹಿರೇಮಠ, ಘನಮಠದಯ್ಯ ಸಾಲಿಮಠ, ಸಿದ್ದಲಿಂಗಯ್ಯ ಸೊಪ್ಪಿಮಠ, ಕರಿಬಸಯ್ಯ ಸಿಂಧನೂರುಮಠ, ಶರಣಯ್ಯ ಸೊಪ್ಪಿಮಠ, ಅಪ್ಪಾಜಿಗೌಡ ಪಾಟೀಲ, ಮಲ್ಲಪ್ಪ ಕುಡತನಿ, ಪಂಪಣ್ಣ ಗುಂಡಳ್ಳಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಅಂದಾನಪ್ಪ ಗುಂಡಳ್ಳಿ, ಮಲ್ಲಿಕಾರ್ಜುನ ಕಂದಗಲ್ಲ, ಅಮರಣ್ಣ ನಾಗರಬೆಂಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net