ಮಹಾಗಾಂವ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

PH 04
Published on

ಕಮಲಾಪುರ: ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಹಾಗಾಂವ್ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಲಬುರಗಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಕ್ರೀಡಾಕೂಟದ 3000 ಮೀ ಓಟದಲ್ಲಿ ಸುಭಾಷ ಸಿದ್ದಣ್ಣ (ಪ್ರಥಮ), ಯೋಗ- ಅವಿನಾಶ ಬಲವಂತ (ಪ್ರಥಮ), 300 ಮೀ ಓಟ- ಸಾಗರ ಶ್ರೀಮಂತ (ಪ್ರಥಮ), 400 ಮೀ ಓಟ- ರಕ್ಷಿತಾ ರಮೇಶ (ದ್ವಿತೀಯ) ಭರ್ಜರಿ ಪ್ರದರ್ಶನ ನೀಡಿ ಸಾಧನೆ ಮೆರೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯೆ ಜಯಶ್ರೀ ಪಾಟೀಲ್, ಉಪನ್ಯಾಸಕರಾದ ಪರಮೇಶ್ವರ ಡಿ., ಕಾಶೀಬಾಯಿ ಸಾಹು, ವಿದ್ಯಾವತಿ ಚಿದ್ರಿ, ಸುರೇಖಾ ಅಷ್ಟಗಿ, ಸಂತೋಷಕುಮಾರ, ಶ್ರಾವಣಿ ಢಗೆ, ಬೋಧಕ- ಬೋಧಕೇತರ ಸಿಬ್ಬಂದಿ ಹರ್ಷ ವ್ತಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net