ಶಾಸನ ಸಾಹಿತ್ಯ ಪರಿಷತ್​ ಮಹಾಧಿವೇಶನ

www
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಶಾಸನ ಸಾಹಿತ್ಯ ಪರಿಷತ್​, ಜನತಾ ಶಿಣ ಸಮಿತಿ, ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್​ ಮೊದಲ ಮಹಾಧಿವೇಶನವನ್ನು ಏ. 29, 30ರಂದು ನಗರದ ಜೆಎಸ್​ಎಸ್​ ಆವರಣದ ರತ್ನವರ್ಮ ಹೆಗ್ಗಡೆ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಶಾಸನಶಾಸ್ತ್ರದ ಉಗಮ, ವಿಕಾಸ ಮತ್ತು ಅಧ್ಯಯನದ ಮಹತ್ವದ ಬಗ್ಗೆ ತಿಳಿಸಲು ಮಹಾಧಿವೇಶನ ಏರ್ಪಡಿಸಲಾಗಿದೆ. ಏ. 29ರಂದು ಬೆಳಗ್ಗೆ 10ಕ್ಕೆ ಹಿರಿಯ ವಿದ್ವಾಂಸ ಡಾ. ಬಿ.ವಿ. ಶಿರೂರ ಉದ್ಘಾಟಿಸುವರು. ಹಂಪಿ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂತಿರ್ ಸರ್ವಾಧ್ಯತೆ ವಹಿಸುವರು. ಛಾಯಾಚಿತ್ರ ಪ್ರದರ್ಶನಕ್ಕೆ ಜೆಎಸ್​ಎಸ್​ ಕಾರ್ಯದಶಿರ್ ಡಾ. ಅಜಿತ ಪ್ರಸಾದ, ಚಿತ್ರಕಲಾ ಪ್ರದರ್ಶನಕ್ಕೆ ಭಾರತೀಯ ಪುರಾತತ್ವ ಸರ್ವೇಣಾ ಇಲಾಖೆ ಅಧೀಕಿ ಡಾ. ರೇಷ್ಮಾ ಸಾವಂತ್​ ಚಾಲನೆ ನೀಡುವರು.
10 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡ 2023ನೇ ಸಾಲಿನ ಡಾ. ಎಂ.ಎಂ.ಕಲಬುಗಿರ್ ಶಾಸನ ಸಾಹಿತ್ಯ ಪ್ರಶಸ್ತಿಯನ್ನು ವಿದ್ವಾಂಸ ಡಾ. ಬಿ.ವಿ.ಶಿರೂರ ಅವರಿಗೆ, 5 ಸಾವಿರ ರೂ. ನಗದು ಒಳಗೊಂಡ ಡಾ. ಬಿ.ಆರ್​.ಹಿರೇಮಠ ಸಂಶೋಧನಾ ಪ್ರಶಸ್ತಿಯನ್ನು ಡಾ. ದೇವರಕೊಂಡಾರೆಡ್ಡಿ ಅವರಿಗೆ ಪ್ರದಾನ ಮಾಡಲಾಗುವುದು.
ಏ. 30ರ ಸಂಜೆ 4ಕ್ಕೆ ಜಾನಪದ ವಿವಿ ಕುಲಪತಿ ಡಾ.ಟಿ.ಎಂ.ಬಾಸ್ಕರ್​ ಸಮಾರೋಪ ನುಡಿಗಳನ್ನಾಡಲಿದ್ದು, ಡಾ. ಅಜಿತ ಪ್ರಸಾದ ಅಧ್ಯತೆ ವಹಿಸುವರು. ಡಾ. ಡಿ.ವಿ.ಪರಮಶಿವಮೂತಿರ್ ಪಾಲ್ಗೊಳ್ಳಿದ್ದಾರೆ. ಗಣ್ಯರಾದ ಪ್ರೊ. ಎಸ್​.ಸಿ.ಪಾಟೀಲ, ಮಂಜುಳಾ ಯಲಿಗಾರ, ಡಾ.ಅನಿಲಕುಮಾರ ಆರ್​.ವಿ., ಡಾ. ಈರಣ್ಣ ಕೆ ಪತ್ತಾರ, ಡಾ. ಎಸ್​.ವೈ.ಮುಗಳಿ, ಡಾ. ಲೋಕೇಶ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಶಾಸನ ಸಾಹಿತ್ಯ ಪರಿಷತ್​ ಅಧ್ಯೆ ಹನುಮಾ ಗೋಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net