

ಮುಳಗುಂದ: ಇಲ್ಲಿನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಹಾದೇವಪ್ಪ ವಿಜಾಪುರ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಾಲಿ ಅಧ್ಯಕ್ಷ ಬಿ.ಎಂ. ವಾಲಿ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಹಕಾರಿ ಇಲಾಖೆಯ ಸಹಾಯಕಾಧಿಕಾರಿ ಶಾಂತ ಚುನಾವಣೆ ಕಾರ್ಯ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ಅಶೋಕ ಸೋನಗೋಜಿ, ನಿರ್ದೇಶಕರಾದ ಎಸ್.ಸಿ. ಬಡ್ನಿ, ನಾಗರಾಜ ನೀಲಗುಂದ, ದೇವಪ್ಪ ಲಕ್ಕುಂಡಿ, ಬಸವಣ್ಣೆಪ್ಪ ನಡುಗೇರಿ, ಬಸವರಾಜ ಬಾತಾಖಾನಿ, ಸಂಜೀವ ನೀಲಗುಂದ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ನೀಲಗುಂದ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ್ ಶೇಖ್, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಸುಂಕಾಪೂರ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಂ.ಡಿ. ಬಟ್ಟೂರ, ಮುಖಂಡರಾದ ರಾಮಣ್ಣ ಕಮಾಜಿ, ಬಸವರಾಜ ಬಡ್ನಿ, ಅಶೋಕ ಹುಣಸಿಮರದ, ಮಹಾಂತೇಶ ನೀಲಗುಂದ, ಎಚ್.ಆರ್. ಗಾಡಿ, ವಿಜಯ ನೀಲಗುಂದ, ಮಹಾದೇವಪ್ಪ ಗಡಾದ, ಪಿ.ಎ. ವಂಟಕರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಮಂಜುನಾಥ ಅಳಗವಾಡಿ, ಇತರರಿದ್ದರು.