ಮಹದೇವಪೇಟೆ ಮಹಿಳಾ ಸಹಕಾರ ಸಂಘದ ಕ್ರೀಡೋತ್ಸವ

22mdkd2 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಮಹದೇವಪೇಟೆ ಮಹಿಳಾ ಸಹಕಾರ ಸಂಘ ಆಶ್ರಯದಲ್ಲಿ ಸಂಘದ ಸದಸ್ಯೆಯರಿಗೆ ಮಂಗಳವಾರ ಕ್ರೀಡೋತ್ಸವ ನಡೆಯಿತು. ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಸವಿತಾ ಭಟ್, ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದರು.

ಮಹಿಳೆಯರು ನಿತ್ಯದ ಯಾಂತ್ರಿಕ ಜೀವನದಲ್ಲಿ ಕ್ರೀಡೆ ಉಲ್ಲಾಸ ನೀಡಿ ಜೀವನೋತ್ಸಾವ ಹೆಚ್ಚಿಸುತ್ತದೆ. ಕ್ರೀಡೋತ್ಸವದಿಂದ ಸಂಘದ ಸದಸ್ಯೆಯರ ನಡುವಿನ ಒಗ್ಗಟ್ಟು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

ಸಾಂಪ್ರದಾಯಿಕ ಆಟಗಳಾದ ಚೆನ್ನೆಮಣೆ, ಚೌಕಾಬಾರ ಸೇರಿದ್ದಂತೆ ಕೇರಂ, ಮಡಿಕೆ ಒಡೆಯುವುದು, ಸಂಗೀತ ಕುರ್ಚಿ, ಬಾಲ್ ಎಸೆಯು ವುದು, ಬಕೆಟ್ಗೆ ಬಾಲ್ ಹಾಕುವ ಕ್ರೀಡೆ ಆಯೋಜಿಸಲಾಗಿತ್ತು. ಸಂಘದ ಉಪಾಧ್ಯಕ್ಷೆ ಶೈಲಾ ಮಂಜುನಾಥ್, ಆಡಳಿತ ಮಂಡಳಿ ಸದಸ್ಯೆಯ ರಾದ ವಸುಂಧರಾ ಪ್ರಸನ್ನ, ರೂಪ ಸುಮಂತ್, ಸುಶೀಲಾ ವಾಸುದೇವ್, ಆಯಿಷಾ ಹಮೀದ್ ,ಕನ್ನಂಡ ಕವಿತಾ ಬೊಳ್ಳಪ್ಪ, ಶುಭಾ ವಿಶ್ವ ನಾಥ್, ಸಂಧ್ಯಾ ಅಶೋಕ್ ಮತ್ತಿತರರು ಇದ್ದರು.

ವಿಜೇತರು: ಕೇರಂ ಸ್ಪರ್ಧೆಯಲ್ಲಿ ಬಿ.ಎಸ್. ಭಾಗ್ಯ (ಪ್ರಥಮ), ಕಮಲಾ ಮುರುಗೇಶ್ (ದ್ವಿತೀಯ) ಬಹುಮಾನ ಪಡೆದರು. ಚೌಕಾಬಾರ ದಲ್ಲಿ ಪ್ರತಿಮಾ ರವಿ (ಪ್ರ), ವೀಣಾ ದಿನೇಶ್ (ದ್ವಿ), ಚೆನ್ನೆಮಣೆಯಲ್ಲಿ ಜಯಶೀಲಾ ಪ್ರಕಾಶ್ (ಪ್ರ), ಬಿ.ಎಸ್. ಭಾಗ್ಯ (ದ್ವಿ) ಬಹುಮಾನ ಪಡೆದರು.

ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಬುಕ್ ಬ್ಯಾಲೆನ್ಸಿಂಗ್ ಓಟದಲ್ಲಿ ಗಂಗಮ್ಮ ಉತ್ತಪ್ಪ (ಪ್ರ), ಟಿ.ಎಸ್. ಗಂಗಮ್ಮ (ದ್ವಿ), ಕಿರಿಯರ ವಿಭಾಗದಲ್ಲಿ ಸವಿತಾ ಭಟ್ (ಪ್ರ), ಕನ್ನಂಡ ಕವಿತಾ ಬೊಳ್ಳಪ್ಪ (ದ್ವಿ), ಬಕೆಟ್ಗೆ ಬಾಲ್ ಹಾಕುವುದರಲ್ಲಿ ಹಿರಿಯರ ವಿಭಾಗದಲ್ಲಿ ವಸಂತಿ ಪೂಣಚ್ಚ (ಪ್ರ), ಜಯಶೀಲಾ ಪ್ರಕಾಶ್ (ದ್ವಿ), ಕಿರಿಯರ ವಿಭಾಗದಲ್ಲಿ ಹರಿಣಾಕ್ಷಿ (ಪ್ರ), ಪ್ರತಿಮಾ ರವಿ (ದ್ವಿ) ಬಹುಮಾನ ಪಡೆದರು.

ಬಾಲ್ ಎಸೆಯುವುದರಲ್ಲಿ ಗಾಂಧಿ ಮಣಿ (ಪ್ರ), ಶೋಭಾ ಜಯಕೃಷ್ಣ (ದ್ವಿ), ಸಂಗೀತ ಕುರ್ಚಿ ಸ್ಪರ್ಧೆಯ ಹಿರಿಯ ನಾಗರಿಕರ ವಿಭಾಗದಲ್ಲಿ ಶೋಭಾ ಜಯಕೃಷ್ಣ (ಪ್ರ), ಅರವಿಂದಾ ಅಣ್ಣಪ್ಪ (ದ್ವಿ), ಕಿರಿಯರ ವಿಭಾಗದಲ್ಲಿ ಗೀತಾ ಮಂಜುನಾಥ್ (ಪ್ರ), ಗೀತಾ ಮಧುಕರ್ (ದ್ವಿ), ಮಡಿಕೆ ಒಡೆಯವುದರಲ್ಲಿ ಎಂ.ಜಿ. ಭವಾನಿ, ಗೀತಾ ಮಧುಕರ್, ಸುಶೀಲಾ ವಾಸುದೇವ್, ಸವಿತಾ ಭಟ್, ಕವಿತಾ ಬೊಳ್ಳಪ್ಪ ಬಹುಮಾನ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net