ಗುರುವಿನ ಆರಾಧನೆಯಿಂದ ನೆಮ್ಮದಿ ಸಾಧ್ಯ

Untitled design(24)
Published on

ಯಲಬುರ್ಗಾ: ಪ್ರತಿಯೊಬ್ಬರೂ ಜೀವನದಲ್ಲಿ ಗುರುವಿನ ಆರಾಧನೆ ಮಾಡುವುದರಿಂದ ಹಾಗೂ ಭಕ್ತಿಪೂರ್ವಕವಾಗಿ ನಡೆದುಕೊಳ್ಳುವುದರಿಂದ ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಶ್ರೀ ಮಹಾದೇವ ದೇವರು ಹೇಳಿದರು.

ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ 23ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಾವು ಮಾಡುವ ಕಾಯಕದಲ್ಲಿಯೇ ದೇವರನ್ನು ಕಾಣಬೇಕು ಹಾಗೂ ಯಾವುದೇ ಕಾರ್ಯವನ್ನು ಶ್ರದ್ಧೆ, ನಿಷ್ಠೆಯಿಂದ ಮಾಡಿದಾಗ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

ನಂತರ ಭಕ್ತರಿಂದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಯ ತುಲಾಭಾರ ಸೇವೆ, ಧಾರ್ಮಿಕ ಕಾರ್ಯಗಳು ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಜಿಗೇರಿ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಪ್ರಮುಖರಾದ ಅಮರಪ್ಪ ಕಲಬುರ್ಗಿ, ಭವರಸಿಂಗ್ ರಾಜಪುರೋಹಿತ, ತೇಜಸಿಂಗ್, ಚಂದನಸಿಂಗ್, ಲಾಲ್‌ಸಿಂಗ್, ಜೀವನಸಿಂಗ್, ನಿಂಗಪ್ಪ ಹೂಗಾರ, ಶರಣಪ್ಪ, ಸೋಮಪ್ಪ ಬನ್ನಿಕೊಪ್ಪ, ರಾಚಯ್ಯ ಸಾಲಿಮಠ, ಬಗದರಾಮ ಪಟೇಲ, ನಿಂಗರಾಜ ಮಕ್ಕಳ್ಳಿ, ನಿಂಗನಗೌಡ ಹೊಸಮನಿ, ಪಾಯಲ್, ಲಕ್ಷ್ಮಣ ಕಾಳಿ, ಶಿವಮೂರ್ತಿ ಇಟಗಿ, ದೊಡ್ಡಬಸಪ್ಪ ಹಕಾರಿ, ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net